ಸುಳ್ಯ: ಇಲ್ಲಿನ ಎನ್‌ಲೈಟ್ ಎಜುಕೇಶನಲ್ ಸರ್ವಿಸಸ್ (ರಿ) ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ENVISION’26 ಶೈಕ್ಷಣಿಕ ಮಾಹಿತಿ ಕಾರ್ಯಾಗಾರವು ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ನಡೆಯಿತು.
ಅನ್ಸಾರಿಯಾ ಮುದರ್ರಿಸ್ ಅಬೂಬಕ್ಕರ್ ಹಿಮಮಿ ಉಸ್ತಾದ್ ಅವರ ದುವಾದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ರಾಜ್ಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ
ಶಶಿಧರ್ ಎಂ.ಜೆ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿಯವರು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು. ಹಫೀಝ್ ಪಿ.ಅರ್ ಅವರು ನೀಟ್ (NEET) ಪರೀಕ್ಷೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು nLight ಅಧ್ಯಕ್ಷ ಅಬ್ದುಲ್ ಮುಜೀಬ್ ಕೆ.ಬಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಜ್ಜನ ಪ್ರತಿಷ್ಠಾನದ ಸ್ಥಾಪಕ ಉಮ್ಮರ್ ಬೀಜದಕಟ್ಟೆ ಹಾಗೂ ಸಮಾಜ ಸೇವಕ ಮುಹಮ್ಮದ್ ಪಿ.ಎ ಭಾಗವಹಿಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ಅನ್ಸಾರಿಯಾ ಅಧ್ಯಕ್ಷ ಅಬ್ದುಲ್ ಮಜೀದ್ ಜೆ.ಎಸ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಹಾಜಿ ಎಸ್.ಎ ಹಮೀದ್, ಶಿಕ್ಷಣಪ್ರೇಮಿ ಹಾಜಿ ಮೊಯಿದೀನ್ ಫ್ಯಾನ್ಸಿ, ಹಾಜಿ ಎಸ್.ಎಂ ಹಮೀದ್, ಗಾಂಧಿನಗರ ಜಮಾತ್ ಅಧ್ಯಕ್ಷ ಹಾಜಿ ಮುಹಮ್ಮದ್ ಕೆ.ಎಂ.ಎಸ್, ಹಾಜಿ ಹಮೀದ್ ಜೆ.ಎಸ್, ರಫೀಕ್ ಐವತೊಕ್ಲು, ಬಶೀರ್ ಬೆಳ್ಳಾರೆ, ಉಸ್ಮಾನ್ ಮೊಗರ್ಪಣೆ, ಫೈಝಲ್ ಕಟ್ಟೆಕ್ಕಾರ್, ಸಿದ್ದೀಕ್ ನಂದಿನಿ ಉಪಸ್ಥಿತರಿದ್ದರು.
ತಾಲೂಕಿನ ಹೆಚ್ಚಿನ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
nLight ಪ್ರ.ಕಾರ್ಯದರ್ಶಿ ಆಶಿಕ್ ಸುಳ್ಯ, ಕೋಶಾಧಿಕಾರಿ ಶಂಸುದ್ದೀನ್ ಕೆ.ಬಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಹೀದ್ ಪಾರೆ, ಮಸೂದ್ ಮಚ್ಚು ಕಾರ್ಯಕ್ರಮದ ಉಸ್ತುವಾರಿ ವಹಿಸಿದರು. ಕಮಾಲ್ ಎ.ಬಿ ಸ್ವಾಗತಿಸಿ ಆಸಿಫ್ ಪನ್ನೆ ವಂದಿಸಿದರು. ನಿಜಾರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *