ಸಾಮರಸ್ಯದ ಚರಿತ್ರೆ ತಿರುಚುವ ಪ್ರಯತ್ನ ಸಲ್ಲದು: ಜನಾಬ್ ಟಿ.ಎಂ. ಶಹೀದ್ ತೆಕ್ಕಿಲ್ ಕರೆ

ಸುಳ್ಯ: “ನಮ್ಮ ನಾಡು ಸಾಮರಸ್ಯ ಮತ್ತು ಸೌಹಾರ್ದತೆಯ ಸುದೀರ್ಘ ಇತಿಹಾಸವನ್ನು ಹೊಂದಿದೆ. ಆದರೆ ಇಂದು ಚರಿತ್ರೆಗಳನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿದ್ದು, ಇದನ್ನು ನಾವೆಲ್ಲರೂ ಒಗ್ಗೂಡಿ ಎದುರಿಸಬೇಕು,” ಎಂದು ಪೇರಡ್ಕ ಜಮಾಅತ್ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಮಂಡಳಿಯ ಅಧ್ಯಕ್ಷರಾದ (ಸಚಿವ ದರ್ಜೆ) ಜನಾಬ್ ಟಿ.ಎಂ. ಶಹೀದ್ ತೆಕ್ಕಿಲ್ ತಿಳಿಸಿದರು.
ಇತಿಹಾಸ ಪ್ರಸಿದ್ಧ ಪೇರಡ್ಕ ಗೂನಡ್ಕ ಮಖಾಂ ಉರೂಸ್ ಪ್ರಯುಕ್ತ ‘ತೆಕ್ಕಿಲ್ ಮುಹಮ್ಮದ್ ಹಾಜಿ ವೇದಿಕೆ’ಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸರ್ವ ಧರ್ಮ ಸಮ್ಮೇಳನ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸೌಹಾರ್ದತೆಯೇ ಸಮಾಜದ ಅಡಿಪಾಯ
ಇಂದಿನ ತಲೆಮಾರಿಗೆ ದೇಶದ ನೈಜ ಇತಿಹಾಸವನ್ನು ಅರಿಯುವ ಪೂರಕ ವಾತಾವರಣ ಸಿಗುತ್ತಿಲ್ಲ ಎಂದು ವಿಷಾದಿಸಿದ ಅವರು, “ಸಣ್ಣಪುಟ್ಟ ತಪ್ಪುಗಳನ್ನು ವೈಭವೀಕರಿಸುವುದನ್ನು ಬಿಟ್ಟು, ಸಮಾಜದಲ್ಲಿನ ಒಳ್ಳೆಯ ವಿಚಾರಗಳನ್ನು ಪ್ರಚುರಪಡಿಸಬೇಕು. ಆಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ,” ಎಂದರು. ಇದೇ ಸಂದರ್ಭದಲ್ಲಿ ಪೇರಡ್ಕ ಗೂನಡ್ಕ ಭಾಗದಲ್ಲಿ ಸೌಹಾರ್ದಯುತ ಬದುಕಿಗೆ ಅಡಿಪಾಯ ಹಾಕಿದ ತಮ್ಮ ಪೂರ್ವಿಕರಾದ ತೆಕ್ಕಿಲ್ ಮುಹಮ್ಮದ್ ಹಾಜಿ ಅವರ ಕೊಡುಗೆಯನ್ನು ಸ್ಮರಿಸಿದರು.
ಪರಸ್ಪರ ನಂಬಿಕೆ ವೃದ್ಧಿಯಾಗಲಿ
ಪೇರಡ್ಕ ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಸೌಹಾರ್ದ ಸಂದೇಶ ನೀಡಿ, “ದೇಶದ ಪ್ರತಿಯೊಂದು ಹಳ್ಳಿ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲಾ ಧರ್ಮದವರು ಒಂದೆಡೆ ಸೇರಿ ಮುಕ್ತವಾಗಿ ಸಂವಹನ ನಡೆಸಬೇಕು. ಅಂತಹ ಸಂದರ್ಭಗಳಲ್ಲಿ ಮಾತ್ರ ತಪ್ಪು ಕಲ್ಪನೆಗಳು ದೂರವಾಗಿ ನೈಜ ಸೌಹಾರ್ದತೆ ನೆಲೆಸಲು ಸಾಧ್ಯ,” ಎಂದು ಆಶಯ ವ್ಯಕ್ತಪಡಿಸಿದರು.

ಗಣ್ಯರ ಉಪಸ್ಥಿತಿ
ಕಲ್ಲುಗುಂಡಿ ಚರ್ಚ್ ಧರ್ಮಗುರು ರೆವರೆಂಡ್ ಫಾದರ್ ಪೌಲ್ ಕ್ರಾಸ್ತಾ, ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮರ್ ಬೀಜದಕಟ್ಟೆ, ಸುಡಾ ಅಧ್ಯಕ್ಷ ಕೆ.ಎಂ ಮುಸ್ತಫಾ ಸುಳ್ಯ, ಅರಂತೋಡು ಖತೀಬ್ ಇಸ್ಮಾಯಿಲ್ ಫೈಝಿ ಗಟ್ಟಮನೆ, ಸಂಪಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್ ಕೆ ಹನೀಫ ಸಂಪಾಜೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಇಸ್ಮಾಯಿಲ್ ಪಡ್ಪಿನಂಗಡಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ರಾಧಾಕೃಷ್ಣ ಬೊಳ್ಳೂರು, ತೊಡಿಕಾನ ದೇವಸ್ಥಾನ ಸಮಿತಿಯ ತೀರ್ಥರಾಮ ಗೌಡ ಪರ್ನೋಜಿ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ವರ್ತಕರ ಸಂಘದ ಅಧ್ಯಕ್ಷರಾದ ಚಕ್ರಪಾಣಿ ಯು.ಬಿ ಮುಂತಾದವರು ಶುಭಹಾರೈಸಿ ಮಾತನಾಡಿದರು.
ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕಲ್ಲುಗುಂಡಿ ಮಹಾವಿಷ್ಣು ಮೂರ್ತಿ ದೇವಸ್ಥಾನದ ಅಧ್ಯಕ್ಷ ಶ್ರೀ ಜಗದೀಶ್ ರೈ, ಮೂಸೆಕುಂಞಿ ಸುಳ್ಯ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಶಂಸುದ್ದೀನ್, ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ.ಎಸ್, ಅಡ್ವೊಕೇಟ್ ಅಬೂಬಕರ್ ಅಡ್ಕಾರ್, ಮದ್ರಸ ಮೇನೇಜ್ ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿ ಶಂಕರ ಕಲ್ಮಡ್ಕ, ಕ್ರೈಸ್ತ ಸಂಘದ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕ್ರಾಸ್ತಾ, ಕಲ್ಲುಗುಂಡಿ ಚರ್ಚ್ ಉಪಾಧ್ಯಕ್ಷರಾದ ಲ್ಯಾನ್ಸಿ ಡಿಸೋಜ, ಸಂಪತ್ ಕುಮಾರ್ ಎಚ್.ಎಂ, ಇಕ್ಬಾಲ್ ಸುಣ್ಣ ಮೂಲೆ, ಅಶ್ರಫ್ ಹಾಜಿ ಗುಂಡಿ, ಅಬ್ದುಲ್ ಖಾದರ್ ಪಟೇಲ್, ಅಬ್ದುಲ್ ಕಲಾಂ ಸುಳ್ಯ, ಸಾಜಿದ್ ಐ.ಜಿ ಗೂನಡ್ಕ, ರಝಾಕ್ ಸೂಪರ್ ಕಲ್ಲುಗುಂಡಿ, ಎ.ಕೆ ಇಬ್ರಾಹಿಂ ಕಲ್ಲುಗುಂಡಿ, ಇರ್ಷಾದ್ ಬದ್ರಿಯಾ, ಎಸ್ ಪಿ ಅಬ್ದುರ್ರಹ್ಮಾನ್ ಸಂಪಾಜೆ, ರಫೀಕ್ ಪ್ರಗತಿ ಚಿಕನ್, ರಫೀಕ್ ಕರಾವಳಿ ಹೋಟೆಲ್ ಮುಂತಾದವರು ಉಪಸ್ಥಿತರಿದ್ದರು. ಎಂ.ಆರ್.ಡಿ.ಎ ಅಧ್ಯಕ್ಷರಾದ ಜಿ.ಕೆ ಹಮೀದ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಂದಿಸಿದರು.


