ಸುಳ್ಯ: ಇಲ್ಲಿನ ಗಾಂಧಿನಗರ ನಾವೂರು ನಿವಾಸಿ, ಸುಳ್ಯ ಪೇಟೆಯ ಜನತಾ ಸ್ಟೋರ್‌ನ ವ್ಯವಹಾರ ನೋಡಿಕೊಳ್ಳುತ್ತಿದ್ದ ಕಮಾಲ್ (52) ಅವರು ಅಲ್ಪಕಾಲದ ಅಸೌಖ್ಯದಿಂದ ಜ. 18ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ಮಂಗಳೂರು ಕುದ್ರೋಳಿಯವರಾಗಿದ್ದ ಇವರು, ಕಳೆದ 30 ವರ್ಷಗಳಿಂದ ಸುಳ್ಯದಲ್ಲಿ ನೆಲೆಸಿದ್ದರು. ಸುಳ್ಯದ ಜನತಾ ಸ್ಟೋರ್ ಮಾಲಕ ರಿಜ್ವಾನ್ ಅವರ ತಾಯಿಯ ಸಹೋದರರಾಗಿದ್ದ (ಮಾವ) ಕಮಾಲ್ ಅವರು, ಜನತಾ ಸ್ಟೋರ್‌ನಲ್ಲಿ ಸಕ್ರಿಯವಾಗಿ ವ್ಯವಹಾರ ನೋಡಿಕೊಳ್ಳುತ್ತಿದ್ದರು.

​ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಮಂಗಳೂರಿನ ಕುದ್ರೋಳಿಯ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *