ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು ಹಾಗೂ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವ ಟಿ. ಎಂ ಶಾಹೀದ್ ತೆಕ್ಕಿಲ್ ಅವರು ಇಂದು ಉಬರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳ್ಳಡ್ಕಕ್ಕೆ ಭೇಟಿ ನೀಡಿದರು.

​ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯ, ದಿವಂಗತ ದುಗ್ಗಪ್ಪ ಗೌಡರ ಪುತ್ರ ಅನಿಲ್ ಗೌಡ ಬಳ್ಳಡ್ಕ ಅವರು ನಿನ್ನೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರ ನಿವಾಸಕ್ಕೆ ತೆರಳಿದ ಶಾಹೀದ್ ತೆಕ್ಕಿಲ್ ಅವರು ಮೃತರ ಕುಟುಂಬಸ್ಥರಿಗೆ ಭೇಟಿಯಾಗಿ ಸಾಂತ್ವನ ಹೇಳಿದರು.

​ಈ ಸಂದರ್ಭದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಪ್ರಮುಖರಾದ ಸುರೇಶ ಅಮೈ ಹಾಗೂ ಸ್ಥಳೀಯ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *