ಸುಳ್ಯ: ಇತ್ತೀಚೆಗೆ ಜ. 4 ರಂದು ಮುಕ್ತಾಯಗೊಂಡ ಪ್ರತಿಷ್ಠಿತ ‘ಓಲ್ಡ್ ಈಸ್ ಗೋಲ್ಡ್ ಸೀಸನ್-8’ (Old is Gold Season 8) ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ‘ಬೂಮ್ ಬೂಮ್ ವಿಕ್ಟರ್ಸ್’ (Boom Boom Victors) ತಂಡದ ವಿಜಯೋತ್ಸವ ಮತ್ತು ಔತಣ ಕೂಟವು ಶುಕ್ರವಾರ ಜ. 23 ರಂದು ರಾತ್ರಿ ಅದ್ದೂರಿಯಾಗಿ ನೆರವೇರಿತು.

​ತಂಡದ ಅದ್ಭುತ ಗೆಲುವನ್ನು ಸಂಭ್ರಮಿಸಲು ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸುಳ್ಯದ ಗಣ್ಯರು ಹಾಗೂ ಕ್ರೀಡಾ ಪ್ರೇಮಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ.ಎಂ. ಮುಸ್ತಫಾ, ಹಾಗೂ ಸುಳ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಹಮೀದ್ ಕುತ್ತಮೊಟ್ಟೆ,

ಅಲ್ಪಸಂಖ್ಯಾತರ ವಿವಿದೊದ್ದೇಶ ಸಹಕಾರ ಸಂಘದ (ನಿ) ಅಧ್ಯಕ್ಷರಾದ ಶ್ರೀ ಇಕ್ಬಾಲ್ ಎಲಿಮಲೆ, ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್, ಪತ್ರಕರ್ತರಾದ ಹಸೈನಾರ್ ಜಯನಗರ, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಬಶೀರ್ ಆರ್.ಬಿ ಮತ್ತು ಅಸ್ತ್ರಾ ಸ್ಪೋರ್ಟ್ಸ್ ಅಧ್ಯಕ್ಷರಾದ ಶ್ರೀ ರಿಫಾಯಿ, ಶಾಪಿ ಬೊಳುಬೈಲ್, ಆರಿಫ್ ಆದರ್ಶ, ಅಬೂಬಕರ್, ಕೃಷ್ಣರಾಜು,  ಅವರು ಭಾಗವಹಿಸಿ ತಂಡಕ್ಕೆ ಹಾಗೂ ತಂಡದ ಮಾಲೀಕ ನಝೀರ್ ಇವರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ‘ಬೂಮ್ ಬೂಮ್ ವಿಕ್ಟರ್ಸ್’ ತಂಡದ ಆಟಗಾರರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸೇರಿದ ಎಲ್ಲಾ ಕ್ರೀಡಾ ಪ್ರೇಮಿಗಳಿಗೆ ಭೋಜನದ ವ್ಯವಸ್ಥೆ ನೀಡಲಾಯಿತು. ಬಶೀರ್ ಆರ್.ಬಿ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *