ಬಹ್ರೇನ್: ದೇಶದ ಪ್ರಖ್ಯಾತ ರ್ಯಾಪರ್ ಫ್ಲಿಪ್ಪರಾಚಿ (ಹುಸ್ಸಾಮ್ ಅಸೀಮ್) ಅವರು ತಮ್ಮ ಸೂಪರ್ ಹಿಟ್ ಹಾಡು ‘Fa9la’ (ಫಾಸ್ಲಾ) ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಈ ಹಾಡು ಕೇವಲ ಒಂದೇ ವಾರದಲ್ಲಿ ನಾಲ್ಕು ಪ್ರಮುಖ ‘ಬಿಲ್ಬೋರ್ಡ್ ಅರೇಬಿಯಾ’ (Billboard Arabia) ಚಾರ್ಟ್ಗಳಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಅಪರೂಪದ ಮೈಲಿಗಲ್ಲು ಸಾಧಿಸಿದೆ. ಈ ಮೂಲಕ ಫ್ಲಿಪ್ಪರಾಚಿ ಅವರು ಜಾಗತಿಕ ಸಂಗೀತ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಅವರ ಈ ಸಾಧನೆಯನ್ನು ಗುರುತಿಸಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯು ಅವರಿಗೆ ಅಧಿಕೃತ ಪ್ರಮಾಣಪತ್ರ ನೀಡಿ ಗೌರವಿಸಿದೆ.
