
ಅರಂತೋಡು ಪೇಟೆಯಲ್ಲಿ ಸಿಕ್ಕ ಮೊಬೈಲ್ ಫೋನ್ ಅನ್ನು ಅದರ ವಾರಿಸುದಾರರಿಗೆ ನೀಡಿ ಮುನೀರ್ ಪೈಚಾರ್ ರವರು ಪ್ರಾಮಾಣಿಕತೆ ಮೆರೆದಿದ್ದಾರೆ. ಅರಂತೋಡು ಮುಖ್ಯ ಪೇಟೆಯಲ್ಲಿರುವ ಹೋಟೆಲ್ ಫುಡ್ ಪಾಯಿಂಟ್ ಮುಂಭಾಗ ಮುನೀರ್ ರವರಿಗೆ ಬಿದ್ದು ಸಿಕ್ಕಿದ್ದು ಕೂಡಲೇ ಅವರು ಸಾಮಾಜಿಕ ಜಾಲತಾಣ ಸಂದೇಶ ಹಂಚಿಕೊಂಡರು. ಬಳಿಕ ಮೊಬೈಲ್ ಕಳೆದು ಕೊಂಡ ವ್ಯಕ್ತಿ ಕುಂಬಕ್ಕೋಡು ನಿವಾಸಿ ಮೂಸಾ ರವರದ್ದು ಎಂದು ತಿಳಿದು ಬಂದಿದ್ದು ಬಳಿಕ ಅವರು ಅರಂತೋಡಿಗೆ ಬಂದು ಮುನೀರ್ ರವರಿಂದ ಮೊಬೈಲ್ ಫೋನ್ ಕಳೆದು ಹೋಗಿದ್ದ ವಿಚಾರ ತಿಳಿಸಿ ಮೊಬೈಲ್ ಫೋನ್ ಪಡೆದು ಕೊಂಡು ಹೋದರು. ಮುನೀರ್ ರವರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಿಂಗಳ ಮುಂಚೆ ಹೋಟೆಲ್ ನಲ್ಲಿ ಕಳೆದುಕೊಂಡಿದ್ದ ಚಿನ್ನವನ್ನು ಕೂಡಾ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದರು.
