ಸುಳ್ಯ: ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ರಾಧಾಕೃಷ್ಣ ಬೊಳ್ಳೂರು ಅವರಿಗೆ ಅಮರಪಡ್ನೂರು ಮತ್ತು ಅಮರಮುಡ್ನೂರು ಗ್ರಾಮದ ಅಭಿಮಾನಿಗಳಿಂದ ಮಾರ್ಚ್ 1, 2026ರ ಭಾನುವಾರದಂದು ‘ಹುಟ್ಟೂರ ಅಭಿನಂದನೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕುಕ್ಕುಜಡ್ಕದ ಅಮರ ಸಹಕಾರ ಭವನದಲ್ಲಿ ಅಂದು ಸಂಜೆ 4:00 ಗಂಟೆಗೆ ಕಾರ್ಯಕ್ರಮ ಜರುಗಲಿದೆ. ಚೊಕ್ಕಾಡಿ ಉಳ್ಳಾಕುಲು ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀನಾಥ್ ನೆಲ್ಲಕುಂಜ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನೂತನ ಅಧ್ಯಕ್ಷರನ್ನು ಸನ್ಮಾನಿಸಲಿದ್ದಾರೆ. ಕುಕ್ಕುಜಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಸದಾಶಿವ ಮೂಕಮಲೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಶಿಧರ ಮೋಂಟಡ್ಕ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗಣ್ಯರ ಭಾಗಿ:
ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಮಾಜಿ ಸದಸ್ಯ ಶ್ರೀ ಅಣ್ಣಾಜಿ ಗೌಡ ಪೈಲೂರು, ಅಮರಮುಡ್ನೂರು ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀ ಹೂವಪ್ಪ ಗೌಡ, ಸುಳ್ಯ ಲ್ಯಾಂಪ್ಸ್ ಸೊಸೈಟಿಯ ಮಾಜಿ ನಿರ್ದೇಶಕ ಶ್ರೀ ಗೋಪಾಲ ನಾಯ್ಕ್ ಪಾಡಾಜೆ, ಅಮರಪಡ್ನೂರು ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀ ರಾಮಯ್ಯ ರೈ ಶೇಣಿ ಭಾಗವಹಿಸಲಿದ್ದಾರೆ.
ಹಾಗೆಯೇ, ಚೊಕ್ಕಾಡಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀ ವೆಂಕಟ್ರಮಣ ಇಟ್ಟಿಗುಂಡಿ ಮತ್ತು ಶ್ರೀಮತಿ ಸರೋಜಿನಿ ಯತೀಶ್ ಹಿರಿಯಡ್ಕ, ಹಿರಿಯರಾದ ಶ್ರೀ ಅಂಬಾಡಿ ಸಂಕೇಶ ಹಾಗೂ ಸುಳ್ಯ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶ್ರೀ ಚಂದ್ರನ್ ಕೂಟೇಲು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಅಮರಮುಡ್ನೂರು ಮತ್ತು ಅಮರಪಡ್ನೂರು ಗ್ರಾಮದ ಎಲ್ಲಾ ಅಭಿಮಾನಿಗಳು ಹಾಗೂ ಹಿತೈಷಿಗಳು ಈ ಕಾರ್ಯಕ್ರಮಕ್ಕೆ ಸರ್ವರನ್ನೂ ಆದರದಿಂದ ಸ್ವಾಗತಿಸಿದ್ದಾರೆ.




