
ಸುಳ್ಯದ ಜನತೆಯ ಪ್ರೀತಿಗೆ ನಾನು ಎಂದಿಗೂ ಚಿರಋಣಿ: ಹೆಚ್. ಎಂ. ನಂದಕುಮಾರ್
ಮುಸ್ಲಿಮರ ಪವಿತ್ರ ರಂಜಾನ್ ತಿಂಗಳ 19 ನೇ ಉಪವಾಸದ ಪ್ರಯುಕ್ತ ಇಫ್ತಾರ್ ಸೌಹಾರ್ದ ಕೂಟ ಜಯನಗರ ಜನ್ನತುಲ್ ಉಲೂಮ್ ಮದ್ರಸ ವಠಾರದಲ್ಲಿ ಜರಗಿತು. ಅಧ್ಯಕ್ಷತೆಯನ್ನು ಮೊಗರ್ಪಣೆ ಜುಮ್ಮಾ ಮಸ್ಜಿದ್ ಅಧ್ಯಕ್ಷ ಸಿ.ಎಂ. ಉಸ್ಮಾನ್ ವಹಿಸಿದ್ದರು. ಮುಖ್ಯ ಧಾರ್ಮಿಕ ಗುರುಗಳಾದ ಶಫೀಕ್ ಹಿಮಮಿ ದುಃವ ಪ್ರಾರ್ಥನೆ ನೆರವೇರಿಸಿದರು. ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ ಮಡಿಕೇರಿ ಉದ್ಯಮಿ, ಕೆಪಿಸಿಸಿ ಸಂಯೋಜಕ ಹೆಚ್. ಎಂ. ನಂದಕುಮಾರ್ ಮಾತನಾಡಿ
ಸುಳ್ಯದ ಜನತೆ ಎಲ್ಲರನ್ನು ಭೇದ ಭಾವ ಮರೆತು ಪ್ರೀತಿಯಿಂದ ಕಾಣುವವರು ಇದರಿಂದ ನಿಜವಾದ ಸೌಹಾರ್ದ ಮೂಡುತ್ತದೆ, ನನ್ನ 8 ವರ್ಷ ಗಳ ಸುಳ್ಯ ದ ಒಡನಾಟ ಅವಿಸ್ಮರಣೀಯ ಎಂದರು, ಜಯನಗರ ಮಸ್ಜಿದ್ ಗೆ ಸಂಪೂರ್ಣ ಸಹಕಾರ ಮತ್ತು ಕೊಡುಗೆ ನೀಡಲು ಬದ್ದ ಎಂದರು. ವೇದಿಕೆಯಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಗ್ಯಾರಂಟಿ ತಾಲೂಕು ಸಮಿತಿ ಸದಸ್ಯ ಭವಾನಿ ಶಂಕರ್ ಕಲ್ಮಡ್ಕ, ಉದ್ಯಮಿ ಮಹಮ್ಮದ್ ಅಲಿ ಕುಂತೂರ್, ಶ್ರೀ ಶಾರದಾoಭ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲದಾಸ್, ಮಂಜುನಾಥ್ ಮಡ್ತಿಲ, ಮದ್ರಸ ಮತ್ತು ಮಸ್ಜಿದ್ ಸಮಿತಿ ಪದಾಧಿಕಾರಿಗಳಾದ ನವಾಜ್ ಪಂಡಿತ್, ಗುತ್ತಿಗೆದಾರ ಝಹಿರ್ ಜಯನಗರ ನಂದಕುಮಾರ್ ಮತ್ತು ಮಹಮ್ಮದ್ ಅಲಿ ಯವರಿಗೆ ಗೌರವಾರ್ಪಣೆ ಮಾಡಿದರು, ಪತ್ರಕರ್ತ ಹಸೈನಾರ್ ಜಯನಗರ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪ್ರಾರ್ಥನಾ ಸಂಗಮ ಮತ್ತು ಅನ್ನದಾನ ನಡೆಯಿತು




