ಸುಳ್ಯ: ಚಲಿಸುತ್ತಿದ್ದ ಲಾರಿಯೊಂದರ ಇಂಜಿನ್ ಹಾಗೂ ಕಂಟೈನರ್ ಹಠಾತ್ತಾಗಿ ಬೇರ್ಪಟ್ಟು, ಕಂಟೈನರ್ ರಸ್ತೆಯಲ್ಲಿ ಪಲ್ಟಿಯಾದ ಘಟನೆ ಸುಳ್ಯದ ಪರಿವಾರಕಾನ ಸಮೀಪದ ತಿರುವಿನಲ್ಲಿ ಇಂದು (ಮಾ. 13) ಮಧ್ಯಾಹ್ನ ನಡೆದಿದೆ.

ಚಾಲಕನಿದ್ದ ಕ್ಯಾಬಿನ್ ಮತ್ತು ಇಂಜಿನ್ ಭಾಗವು ಕಂಟೈನರ್‌ನಿಂದ ಕಳಚಿಕೊಂಡಿದ್ದು, ರಸ್ತೆಯಲ್ಲಿ ಸುಮಾರು 20 ಅಡಿಗಳಷ್ಟು ಮುಂದಕ್ಕೆ ಹೋಗಿ ನಿಂತಿದೆ. ಹಿಂಬದಿಯ ಕಂಟೈನರ್ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಮಗುಚಿ ಬಿದ್ದಿದೆ.
ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕ ಕೂಡ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.





