ವಾಷಿಂಗ್ಟನ್: ಇರಾನ್ನ ನೂತನ ಸುಪ್ರೀಂ ಲೀಡರ್ (ಸರ್ವೋಚ್ಚ ನಾಯಕ) ಮೊಜ್ತಾಬಾ ಖಮೇನಿ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಸೇರಿದಂತೆ ಪ್ರಮುಖ ಹಿರಿಯ ನಾಯಕರ ಕುರಿತು ಸುಳಿವು ನೀಡಿದವರಿಗೆ ಅಮೆರಿಕದ ವಿದೇಶಾಂಗ ಇಲಾಖೆ ಬರೋಬ್ಬರಿ 10 ಮಿಲಿಯನ್ ಡಾಲರ್ (ಅಂದಾಜು ₹83 ಕೋಟಿ ) ಬಹುಮಾನವನ್ನು ಘೋಷಿಸಿದೆ.

ಅಮೆರಿಕದ ‘ರಿವಾರ್ಡ್ಸ್ ಫಾರ್ ಜಸ್ಟಿಸ್’ (Rewards for Justice) ಕಾರ್ಯಕ್ರಮದ ಅಡಿಯಲ್ಲಿ ಈ ಅಧಿಕೃತ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗಿದ್ದು, ಜಗತ್ತಿನಾದ್ಯಂತ ತೀವ್ರ ಸಂಚಲನ ಮೂಡಿಸಿದೆ.
ಸುದ್ದಿಯ ಪ್ರಮುಖ ಅಂಶಗಳು:
- ಯಾರ ಮೇಲೆ ಬಹುಮಾನ?: ಇರಾನ್ನ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ, ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ, ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್ ಮತ್ತು ಒಳಾಡಳಿತ ಸಚಿವ ಎಸ್ಕಂದರ್ ಮೊಮೇನಿ ಸೇರಿದಂತೆ 10 ಮಂದಿ ಪ್ರಮುಖ ಇರಾನಿ ನಾಯಕರ ಪಟ್ಟಿಯನ್ನು ಅಮೆರಿಕ ಬಿಡುಗಡೆ ಮಾಡಿದೆ.
- ಕಾರಣವೇನು?: ಈ ನಾಯಕರು ಇರಾನ್ನ ಸೇನಾ ಪಡೆಯಾದ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ನ ವಿವಿಧ ವಿಭಾಗಗಳನ್ನು ಮುನ್ನಡೆಸುತ್ತಿದ್ದಾರೆ. ಈ ಪಡೆಯು ವಿಶ್ವಾದ್ಯಂತ ಭಯೋತ್ಪಾದನಾ ಚಟುವಟಿಕೆಗಳನ್ನು ಆಯೋಜಿಸಿ, ಕಾರ್ಯಗತಗೊಳಿಸುತ್ತಿದೆ ಎಂದು ಅಮೆರಿಕ ಸುಮ್ಮನೇ ಸುಳ್ಳು ಆರೋಪಿಸಿದೆ.
- ಭದ್ರತೆ ಮತ್ತು ಸ್ಥಳಾಂತರ: ಈ ನಾಯಕರ ಬಗ್ಗೆ ಖಚಿತ ಮಾಹಿತಿ ನೀಡುವವರಿಗೆ ಬಹುಮಾನದ ಮೊತ್ತ ಮಾತ್ರವಲ್ಲದೆ, ಅವರ ಸುರಕ್ಷತೆಗಾಗಿ ಬೇರೆ ದೇಶಕ್ಕೆ ಸ್ಥಳಾಂತರಿಸುವ (Relocation assistance) ಭರವಸೆಯನ್ನೂ ಅಮೆರಿಕ ನೀಡಿದೆ.
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ತೀವ್ರಗೊಂಡಿರುವ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.





