ಸುಳ್ಯ (ದಕ್ಷಿಣ ಕನ್ನಡ): ತಾಲೂಕಿನ ಪೈಚಾರು ಗ್ರಾಮದ ಸಲಫಿ ಜುಮಾ ಮಸೀದಿಯಲ್ಲಿ ಪವಿತ್ರ ‘ಈದ್ ಉಲ್ ಫಿತ್ರ್’ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಬೆಳಿಗ್ಗೆ 7:00 ಗಂಟೆಗೆ ಸರಿಯಾಗಿ ಈದ್ ನಮಾಜ್ ಜರುಗಿತು. ನಮಾಝ್ ಬಳಿಕ ನಡೆದ ‘ಈದ್ ಖುತುಬಾ’ವನ್ನು (ಪ್ರವಚನ) ಮೌಲವಿ ಅಬ್ದುಲ್ ವಹ್ಹಾಬ್ ಮದನಿ ಅವರು ನೆರವೇರಿಸಿದರು.ಸಮಸ್ತ ಮುಸ್ಲಿಂ ಬಾಂಧವರು ಒಟ್ಟಾಗಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.





