ಕುಂಬಾರ್ಚೋಡ್ : ಈದುಲ್ ಫಿತ್ರ್ ಸಂಭ್ರಮದ ಹೆಸರಿನಲ್ಲಿ ಅನಗತ್ಯ ಅನಾವಶ್ಯಕ ಆಡಂಬರ ಕಾರ್ಯಕ್ರಮಗಳ ಬದಲಾಗಿ ಸರ್ವಶಕ್ತನಿಗೆ ಸಾಷ್ಟಾಂಗ ಅರ್ಪಿಸುವುದರ ಜೊತೆಯಲ್ಲಿ ದಾನ-ಧರ್ಮಗಳನ್ನು ಹೆಚ್ಚಿಸಿ, ಅಸಾಹಯಕರ, ಧೀನರ ಕಣ್ಣೀರು ಒರೆಸುವ ಮೂಲಕ ಪ್ರವಾದಿ ಸ.ಅ ರವರು ಕಳಿಸಿ ಕೊಟ್ಟ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಈದ್ ಸಂಭ್ರಮವನ್ನು ಆಚರಿಸುವಂತೆ ಮುಹಿಯದ್ದೀನ್ ಜುಮಾ ಮಸೀದಿ ಕುಂಬಾರ್ಚೋಡ್ ಇದರ ಖತೀಬರಾದ ಬಹು॥ ಇಕ್ಬಾಲ್ ಇರ್ಫಾನಿ ಮುಂಡೋಲೆ ರವರು ಈದ್ ಸಂದೇಶದೊಂದಿಗೆ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದರು. ಈದುಲ್ ಫಿತರ್ ಇಸ್ಲಾಂ ಧರ್ಮದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದ್ದು, ಈದುಲ್ ಫಿತ್ರ್ ವಿಶೇಷ ಪ್ರಾರ್ಥನೆ ಬಳಿಕ ಜಮಾಅತ್ ನಮ್ಮ ಪೂರ್ವಿಕರ ಪರಲೋಕ ಜೀವನ ಸುಖಕರವಾಗಿರಲಿ ಎಂದು ಸರ್ವಶಕ್ತನಲ್ಲಿ ಬೇಡಿಕೊಂಡರು.

Leave a Reply

Your email address will not be published. Required fields are marked *