ಗೂನಡ್ಕ: ಕಲ್ಲಡ್ಕ ಮೂಲದ ಯುವಕನೋರ್ವ ಗೂನಾಡ್ಕದ ಹೋಮ್ ಸ್ಟೇ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ಘಟನೆ ವರದಿಯಾಗಿದೆ. ಮೃತ ಯುವಕನನ್ನು ಕಲ್ಲಡ್ಕ ನಿವಾಸಿ ತಿಲಕರಾಜ್ ಎಂದು ಗುರುತಿಸಲಾಗಿದೆ.

ಯುವಕ ಯಾವ ಕಾರಣಕ್ಕಾಗಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂಬ ನಿಖರ ಮಾಹಿತಿ ಸದ್ಯಕ್ಕೆ ತಿಳಿದುಬಂದಿಲ್ಲ. ಘಟನೆಯ ಬಗ್ಗೆ ಮಾಹಿತಿ ಲಭ್ಯವಾದ ಕೂಡಲೇ, ತಾಜುದ್ದೀನ್ ಟರ್ಲಿ ಅವರ ಸಹಕಾರ ಹಾಗೂ ನೆರವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಯುವಕನ ಮೃತದೇಹವನ್ನು ಕೆಳಗಿಳಿಸಿ ಹೊರತೆಗೆಯಲಾಯಿತು.
ಈ ಕುರಿತು ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದು, ತನಿಖೆಯ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.





