ಸುಳ್ಯ: ತಾಲೂಕಿನ ಬೊಳುಬೈಲು ಬಳಿ ಕಾರು ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಸಾವನಪ್ಪಿರುವ ಘಟನೆ ಇಂದು ವರದಿಯಾಗಿದೆ.

ಅಪಘಾತಕ್ಕೆ ನಿಖರವಾದ ಕಾರಣ ಮತ್ತು ಗಾಯಾಳುವಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಸರಣಿ ಅಪಘಾತ – ಸ್ಥಳೀಯರಲ್ಲಿ ಆತಂಕ:

ಬೊಳುಬೈಲು ಪ್ರದೇಶವು ಇತ್ತೀಚೆಗೆ ಅಪಘಾತಗಳ ವಲಯವಾಗಿ (ಬ್ಲ್ಯಾಕ್ ಸ್ಪಾಟ್) ಮಾರ್ಪಡುತ್ತಿರುವ ಆತಂಕ ಕಾಡುತ್ತಿದೆ. ಇದೇ ಸ್ಥಳದಲ್ಲಿ ಇತ್ತೀಚೆಗಷ್ಟೇ ಎರಡು-ಮೂರು ಅಪಘಾತಗಳು ಸಂಭವಿಸಿದ್ದು, ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ಭಯ ಮೂಡಿಸಿದೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ವ್ಯವಸ್ಥೆ ತಕ್ಷಣವೇ ಎಚ್ಚೆತ್ತುಕೊಂಡು ಈ ಜಾಗದಲ್ಲಿ ಸೂಕ್ತ ರಸ್ತೆ ಸುರಕ್ಷತಾ ಕ್ರಮಗಳನ್ನು (ಸೂಚನಾ ಫಲಕಗಳು, ವೇಗ ನಿಯಂತ್ರಕಗಳು ಇತ್ಯಾದಿ) ಅಳವಡಿಸಬೇಕು ಎಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *