ಬದ್ರಿಯಾ ಜುಮಾ ಮಸ್ಜಿದ್ ಪೈಚಾರ್ ಹಾಗೂ ಖುವ್ವತುಲ್ ಇಸ್ಲಾಂ ಮದರಸ ಇದರ ವತಿಯಿಂದ ಬೃಹತ್ ಮೀಲಾದ್ ಜಾಥ
ಲೋಕ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ರವರ 1500 ನೇ ಜನ್ಮದಿನ ಪ್ರಯುಕ್ತ ಬದ್ರಿಯಾ ಜುಮಾ ಮಸ್ಜಿದ್ ಪೈಚಾರ್ ಹಾಗೂ ಖುವ್ವತುಲ್ ಇಸ್ಲಾಂ ಮದರಸ ಇದರ ವತಿಯಿಂದ ಬೃಹತ್ ಮೀಲಾದ್ ಜಾಥ ಕಾರ್ಯಕ್ರಮ ಸೆ.5 ರಂದು ಪೈಚಾರ್ ವಠಾರದಲ್ಲಿ ನಡೆಯಿತು. ಕಾಲ್ನಡಿಗೆ ಜಾಥಾವನ್ನು, ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಹನಿಫ್ ಪಿ.ಕೆ ಹಾಗೂ ಉಪಾಧ್ಯಕ್ಷ ಇಬ್ರಾಹಿಂ ಎಸ್.ಎ ಯವರು ಅಧ್ಯಕ್ಷರಾದ ಇಬ್ರಾಹಿಂ ಹಾಜಿಯವರಿಗೆ ಧ್ವಜ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಲಾಯಿತು. ದುಅವ ವನ್ನು ಖತೀಬರಾದ ಶಮೀರ್ ಅಹ್ಮದ್ ನಈಮಿ ನೆರವೇರಿಸಿದರು. ಕಾಲ್ನಡಿಗೆ ಜಾಥವೂ ಪೈಚಾರಿನಿಂದ ಓಡಬಾಯಿ ತನಕ ಮಕ್ಕಳ ದಫ್ ಜೊತೆಗೂಡಿ ಕಲರವದಿಂದ ಸಾಗಿತು, ಈ ಜಾಥಾದಲ್ಲಿ ಸದರ್ ಉಸ್ತಾದ್ ಪೈಝಲ್ ಸಖಾಫಿ, ಮುಅಲ್ಲಿಂ ಉಸ್ತಾದ್ ಜಝೀಲ್ ಸಖಾಫಿ, ಮಾಅಝಿನ್ ಹನೀಫ್ ಮದನಿ, ಗ್ರಾ.ಪಂಚಾಯತ್ ಸದಸ್ಯರಾದ ಮುಜೀಬ್, ಅಲ್ ಅಮೀನ್ ಯೂತ್ ಸೆಂಟರ್ ಅಧ್ಯಕ್ಷ ಅಬ್ದುಲ್ ಸತ್ತಾರ್, ಕಾರ್ಯದರ್ಶಿ ಸಾಲಿ ಪೈಚಾರ್ ಹಾಗೂ ಜಮಾಅತ್ತಿನ ಸದಸ್ಯರು, ಊರ ಮಹನೀಯರು ಉಪಸ್ಥಿತರಿದ್ದರು. ಮೀಲಾದ್ ಭಾಗವಾಗಿ ಸೆ.6 ಹಾಗೂ 7 ರಂದು ಮದರಸ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ‘ನೂರೆ ಮುಜಸ್ಸಮ್’ ಮೀಲಾದ್ ಫೆಸ್ಟ್ ನಡೆಯಲಿದ್ದು, ಸೆ.6 (ಇಂದ)ಮಧ್ಯಾಹ್ನ 2 ಗಂಟೆಯಿಂದ ಹೆಣ್ಣು ಮಕ್ಕಳ ಕಾರ್ಯಕ್ರಮ, ನಾಳೆ ಸೆ.7 ಬೆಳಗ್ಗೆ 9 ರಿಂದ ಸಂಜೆ 7 ರ ತನಕ ಗಂಡು ಮಕ್ಕಳ ಕಾರ್ಯಕ್ರಮ ಜರಗಲಿದೆ.


