ನಗರದ ಹೊಯ್ಗೆ ಬಜಾರ್ ನ ಲೂಕ್ಯೆ ಹೌಸ್ ಪಾಲ್ಗಣಿ ನಿವಾಸಿ ಶಾಹಿನಾ ಬಾನು (23) ಎಂಬವರು ಸ್ನೇಹಿತೆಯರೊಂದಿಗೆ ಮಂಗಳೂರು ಪೇಟೆಗೆ ಹೋಗಿ ತಿರುಗಾಡಿ ಬರುತ್ತೇನೆಂದು ತಂದೆಗೆ ಹೇಳಿ ಮನೆಯಿಂದ ಹೋದವರು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯ ಕುಟುಂಬದವರು ಆಕೆಯ ಸ್ನೇಹಿತರನ್ನು ಸಂಪರ್ಕಿಸಿದಾಗ, ಆಕೆ ತಮ್ಮನ್ನು ಭೇಟಿಯಾಗಲು ಹೋಗಿಲ್ಲ ಎಂದು ಅವರು ದೃಢಪಡಿಸಿದರು. ವಿವಿಧ ಸ್ಥಳಗಳಲ್ಲಿ ಹುಡುಕಾಡಿದರೂ, ಇಲ್ಲಿಯವರೆಗೆ ಆಕೆಯ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ.ಕಾಣೆಯಾದವರ ಚಹರೆ :- ಎತ್ತರ: 4.8 ಅಡಿ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ಕೂದಲು ಹೊಂದಿರುತ್ತಾರೆ. ಕಾಣೆಯಾದ ದಿನ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಟಾಪ್ ಹಾಗೂ ಕಪ್ಪು ಬಣ್ಣದ ಬುರ್ಖಾ ಧರಿಸಿದ್ದರು. ಕನ್ನಡ, ತುಳು, ಹಿಂದಿ, ಇಂಗ್ಲೀಷ್, ಬ್ಯಾರಿ ಭಾಷೆ ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.