ಕುಂಬರ್ಚೋಡು: ಮುಹಿಯದ್ದೀನ್ ಜುಮಾ ಮಸೀದಿಯ ಜಮಾತ್ ಕಾರ್ಯದರ್ಶಿಯಾಗಿ ಸುದೀರ್ಘ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ, ಎಲ್ಲರ ಆತ್ಮೀಯ ಅಬ್ದುಲ್ ಖಾದರ್ ಅಕ್ಕರೆ (ಕಾದರ್ಚ) ಅವರು ಪವಿತ್ರ ಉಮ್ರಾ ಯಾತ್ರೆಗೆ ತೆರಳುತ್ತಿದ್ದು, ಅವರಿಗೆ ಮಸೀದಿಯಲ್ಲಿ ಬೀಳ್ಕೊಡುಗೆ ನೀಡಲಾಯಿತು.

ಇದೇ ಬರುವ ಫೆ. 2ನೇ ತಾರೀಖಿನಂದು ಅಬ್ದುಲ್ ಖಾದರ್ ಅವರು ಪವಿತ್ರ ಉಮ್ರಾ ಯಾತ್ರೆಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಪ್ರಯುಕ್ತ ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಜಮಾತ್ ವತಿಯಿಂದ ಅವರನ್ನು ಗೌರವಿಸಿ, ಯಾತ್ರೆಗೆ ಶುಭ ಹಾರೈಸಲಾಯಿತು.
ಕಳೆದ ಏಳು ವರ್ಷಗಳಿಂದ ಜಮಾತಿನ ಕಾರ್ಯದರ್ಶಿಯಾಗಿ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆ ಮತ್ತು ಜಮಾತಿನ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಸಮಾರಂಭದಲ್ಲಿ ಜಮಾತಿನ ಪದಾಧಿಕಾರಿಗಳು, ಸದಸ್ಯರು ಹಾಗೂ ಊರ ಹಿರಿಯರು ಉಪಸ್ಥಿತರಿದ್ದು, ಯಾತ್ರೆ ಸುಖಕರವಾಗಲಿ ಮತ್ತು ಅಲ್ಲಾಹನು ಅವರ ಪ್ರಾರ್ಥನೆಯನ್ನು ಸ್ವೀಕರಿಸಲಿ ಎಂದು ದುವಾ ಮಾಡಿದರು.
