ಸುಳ್ಯ: ಇಲ್ಲಿನ ಆರ್ತಾಜೆ ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಒಂಬತ್ತನೇ ಆವೃತ್ತಿಯ ಸ್ಥಳೀಯರ ಲೀಗ್ ಮಾದರಿಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಅ.11 ರಂದು ಬೊಳುಬೈಲು ಮೈದಾನದಲ್ಲಿ ನಡೆಯಿತು. ರಿಫಾಯಿ ಮಾಲೀಕತ್ವದ ಅಸ್ತ್ರ ಟ್ರಾನ್ಸ್‌ಪೋರ್ಟ್ ಚಾಂಪಿಯನ್, ಹಾಗೂ ಶಾಫಿ ಪ್ರಗತಿ ಮಾಲೀಕತ್ವದ ಪ್ರಗತಿ ವಾರಿಯರ್ಸ್ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿತು.
ಲೀಗ್ ಪಂದ್ಯದ ಟಾಪರ್ ಆಗಿ ಅಸ್ತ್ರ ನೇರ ಫೈನಲ್ ಪ್ರವೇಶಿಸದರು. ಇನ್ನೂ ಸೆಮಿ-ಫೈನಲ್‌ನಲ್ಲಿ ಪ್ರಗತಿ ವಾರಿಯರ್ಸ್ ಹಾಗೂ ಎಂಬಿಎಸ್ ಪಂದ್ಯದಲ್ಲಿ ಎಂಬಿಎಸ್ ಬ್ರದರ್ಸ್ ತಂದ ಅತ್ಯಂತ ಪೈಪೋಟಿ ನೀಡಿದರು ಸೋಲೊಪ್ಪಬೇಕಾಯಿತು. ಮುಂದೆ ಫೈನಲ್ ಪಂದ್ಯ ಅಂತು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು. ಫೈನಲ್ ಪಂದ್ಯಾಟ ಸಮಬಲದಲ್ಲಿ ಮುಕ್ತಾಯವಾಯಿತು. ಮುಂದೆ ಪಂದ್ಯಾಟದ ಫಲಿತಾಂಶಕ್ಕಾಗಿ ಐದು ಗೋಲ್ಡನ್ ರೈಡ್ ನೀಡಲಾಯಿತು. ಈ ಮೂಲಕ ಅಸ್ತ್ರ ಟ್ರಾನ್ಸ್‌ಪೋರ್ಟ್ ಚಾಂಪಿಯನ್ ಪಟ್ಟಕ್ಕೆ ಮುತ್ತನಿಟ್ಟಿತ್ತು. ವೈಯಕ್ತಿಕ ಪ್ರಶಸ್ತಿ ಉತ್ತಮ ಹಿಡಿತಗಾರನಾಗಿ ಶಿಮಾಝ್, ಉತ್ತಮ ದಾಳಿಗಾರನಾಗಿ ನಿಝಾರ್ kdb, ಸರ್ವಾಂಗೀಣ ಆಟಗಾರನಾಗಿ ಜುನೈದ್ ಆಯ್ಕೆಯಾದರು.
ಇದೇ ಸಂಧರ್ಭದಲ್ಲಿ ಎ.ಎಫ್.ಸಿ ಕ್ಲಬ್ ಜೊತೆ ಈ ಪಂದ್ಯಾಟದ ಯಶಸ್ಸಿಗೆ ಕಾರಣಕರ್ತರಾದ ಶಾಫಿ ಪ್ರಗತಿ ಯವರಿಗೆ ಟೌನ್ ಬಾಯ್ಸ್ ತಂಡದ ಪರವಾಗಿ ಶಾಲು ಹೊದಿಸಿ ಸ್ಮರಣೆಕೆ ನೀಡಿ ಸನ್ಮಾನಿಸಲಾಯಿತು.
