ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಘಟಕದ ವತಿಯಿಂದ ಗ್ರಾಮೀಣ ಮಾರ್ಗಗಳಲ್ಲಿ ಬಸ್ಸು ಸೌಲಭ್ಯ ಕೊರತೆಯ ಕುರಿತು ಕಳೆದ ಜನವರಿ 3ರಂದು ನಡೆಸಿದ ಪ್ರತಿಭಟನೆಗೆ ಫಲವಾಗಿ, ಕಳೆದ 2 ದಿನಗಳಿಂದ ಬಾಳುಗೋಡು ಮಾರ್ಗಕ್ಕೆ ಬಸ್ಸು ಸೇವೆ ಪ್ರಾರಂಭವಾಗಿರುವುದು ಸ್ವಾಗತಾರ್ಹ ಹಾಗೂ ಹರ್ಷಕರ ವಿಷಯವಾಗಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರು ಬಹುಕಾಲದಿಂದ ಬಸ್ಸು ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ಉದ್ದೇಶದಿಂದ ಎಬಿವಿಪಿ ಸುಳ್ಯ ನಗರ ಘಟಕವು ಪ್ರತಿಭಟನೆ ನಡೆಸಿತ್ತು.
ಪ್ರತಿಭಟನೆಯ ನಂತರ ಸಾರಿಗೆ ಇಲಾಖೆಯ ಸಕಾರಾತ್ಮಕ ಸ್ಪಂದನೆ ಹಾಗೂ ಮಾನ್ಯ ಶಾಸಕರ ಸಹಕಾರದಿಂದ ಬಾಳುಗೋಡು ಮಾರ್ಗಕ್ಕೆ ಬಸ್ಸು ಸಂಚಾರ ಆರಂಭವಾಗಿರುವುದು ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಮಹತ್ವದ ಜಯವಾಗಿದ್ದು, ಇದಕ್ಕಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಘಟಕವು ಸಾರಿಗೆ ಇಲಾಖೆ ಮತ್ತು ಮಾನ್ಯ ಶಾಸಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.
ಮುಂದಿನ ದಿನಗಳಲ್ಲಿ ಉಳಿದ ಗ್ರಾಮೀಣ ಮಾರ್ಗಗಳ ಬಸ್ಸು ಸಮಸ್ಯೆಗಳಿಗೂ ಶಾಶ್ವತ ಪರಿಹಾರ ದೊರಕುವವರೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹೋರಾಟ ಮತ್ತು ಪ್ರಯತ್ನ ಮುಂದುವರಿಸಲಿದೆ ಎಂದು ತಿಳಿಸಲಾಗಿದೆ.
– ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್
ಸುಳ್ಯ ನಗರ ಘಟಕ

Leave a Reply

Your email address will not be published. Required fields are marked *