ಪೈಚಾರ್: ಪವಿತ್ರ ರಮಳಾನ್ ತಿಂಗಳ ಪ್ರಯುಕ್ತ ‘ಅಲ್-ಮದೀನಾ ಚಾರಿಟೇಬಲ್ ಟ್ರಸ್ಟ್, ಪೈಚಾರ್’ ವತಿಯಿಂದ ಸುಳ್ಯ ತಾಲೂಕಿನ 30 ಅರ್ಹ ಫಲಾನುಭವಿ ಕುಟುಂಬಗಳಿಗೆ ದಿನನಿತ್ಯ ಉಪಯೋಗದ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.

​ಈ ಸಂದರ್ಭದಲ್ಲಿ ಬದ್ರಿಯಾ ಜುಮಾ ಮಸೀದಿಯ ಖತೀಬ್ ಉಸ್ತಾದ್ ಶಮೀರ್ ಅಹ್ಮದ್ ನಹೀಮಿ ಅವರು ಉಪಸ್ಥಿತರಿದ್ದು ದುವಾಶೀರ್ವಚನಗೈದರು. ಅಲ್-ಮದೀನಾ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕರಾದ ಅಶ್ರಫ್ ಪೈಚಾರ್, ಕರೀಂ (ಫುಡ್ ಪಾಯಿಂಟ್, ಪೈಚಾರ್) ಹಾಗೂ ಟ್ರಸ್ಟ್‌ನ ಸದಸ್ಯರಾದ ರಿಫಾಯ್ ಅಸ್ರ್ತ, ಅಬೂಬಕ್ಕರ್ ಕುಂಬರ್ಚೋಡ್, ಮತ್ತು ಅಬ್ದುಲ್ಲಾ ಪೈಚಾರ್ ಅವರು ಉಪಸ್ಥಿತರಿದ್ದರು.

ಕೊರೊನಾ ಸಂಕಷ್ಟದಲ್ಲೂ ಮಿಡಿದಿದ್ದ ಕರುಳು:

ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಅಲ್-ಮದೀನಾ ಚಾರಿಟೇಬಲ್ ಟ್ರಸ್ಟ್, ನಾಡು ಸಂಕಷ್ಟದಲ್ಲಿದ್ದಾಗಲೂ ಮಹತ್ವದ ಕಾರ್ಯ ಮಾಡಿದೆ. 2020ರಲ್ಲಿ ಕೊರೊನಾ ಮಹಾಮಾರಿ ಮತ್ತು ಲಾಕ್‌ಡೌನ್‌ನಿಂದಾಗಿ ದಿನಗೂಲಿ ಕಾರ್ಮಿಕರು ಹಾಗೂ ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆಗ ಜನರ ಕಷ್ಟವನ್ನು ಅರಿತ ಅಶ್ರಫ್ ಪೈಚಾರ್ ಅವರು, ದಾನಿಗಳ ನೆರವಿನೊಂದಿಗೆ 200ಕ್ಕೂ ಹೆಚ್ಚು ಅರ್ಹ ಕುಟುಂಬಗಳ ಮನೆ ಬಾಗಿಲಿಗೆ ಅತ್ಯಾವಶ್ಯಕ ಆಹಾರ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದ್ದರು. ಅಂದಿನಿಂದಲೇ ಅವರು ‘ಪೈಚಾರಿನ ಬಡವರ ಬಂಧು’ ಎಂದೇ ಗುರುತಿಸಿಕೊಂಡಿದ್ದಾರೆ.

​ಕಳೆದ ಎಂಟು ವರ್ಷಗಳಿಂದ ಬಡ, ನಿರ್ಗತಿಕ, ಅನಾಥ ಕುಟುಂಬಗಳಿಗೆ ಹಾಗೂ ರೋಗಿಗಳಿಗೆ ಆಸರೆಯಾಗಿ ಸಮಾಜಮುಖಿ ಸೇವೆಗೈಯುತ್ತಿರುವ ಕರೀಂ ಪೈಚಾರ್ ಹಾಗೂ ಅಶ್ರಫ್ ಪೈಚಾರ್ ಇವರಿಗೆ ಜಗದೊಡೆಯನಾದ ಅಲ್ಲಾಹನು ಇನ್ನಷ್ಟು ಬಡ ಜನರ ಸೇವೆ ಮಾಡಲು ಅನುಗ್ರಹಿಸಲಿ. ಆಮೀನ್.

Leave a Reply

Your email address will not be published. Required fields are marked *