ಪವಿತ್ರ ರಂಜಾನ್ ಮಾಸಾಚರಣೆಯ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ತಮ್ಮ ಮುಸ್ಲಿಂ ನೌಕರರಿಗೆ ವಿಶೇಷ ರಿಯಾಯಿತಿಯನ್ನು ಪ್ರಕಟಿಸಿವೆ.

​ಫೆಬ್ರವರಿ 18 ರಿಂದ ಮಾರ್ಚ್ 19, 2026 ರವರೆಗೆ ನಡೆಯುವ ಉಪವಾಸದ (Fasting) ತಿಂಗಳಲ್ಲಿ, ಮುಸ್ಲಿಂ ಸಿಬ್ಬಂದಿಗಳು ಪ್ರತಿದಿನ ಸಂಜೆ 4 ಗಂಟೆಗೆ ಕಚೇರಿಯಿಂದ ಮನೆಗೆ ತೆರಳಲು ಅನುಮತಿ ನೀಡಲಾಗಿದೆ. ರಂಜಾನ್ ತಿಂಗಳಲ್ಲಿ ಪ್ರಾರ್ಥನೆ ಮತ್ತು ಉಪವಾಸ ಆಚರಣೆಗೆ ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಷರತ್ತು ಅನ್ವಯ:

ಸರ್ಕಾರವು ಈ ರಿಯಾಯಿತಿ ನೀಡಿದ್ದರೂ, ಒಂದು ಮುಖ್ಯ ಷರತ್ತನ್ನು ವಿಧಿಸಿದೆ. ಕಚೇರಿಯಲ್ಲಿ ಯಾವುದೇ ತುರ್ತು ಪರಿಸ್ಥಿತಿ (Emergencies) ಅಥವಾ ಅಗತ್ಯ ಕೆಲಸಗಳಿದ್ದಲ್ಲಿ ನೌಕರರು ಸಂಜೆ 4 ಗಂಟೆಯ ನಂತರವೂ ಕಚೇರಿಯಲ್ಲಿ ಉಳಿದು ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

Leave a Reply

Your email address will not be published. Required fields are marked *