ಸುಳ್ಯ ಆರಂಬೂರು, ಪೆರಾಜೆ ಪರಿಸರದಲ್ಲಿ ಕಳೆದ ಹಲವು ದಿನಗಳಿಂದ 9 ಕಾಡಾನೆ ಗಳು ಬೀಡು ಬಿಟ್ಟಿದ್ದು, ದಿನ ನಿತ್ಯ ಕೃಷಿಕರು, ಸಾರ್ವಜನಿಕರು ಆತಂಕಲ್ಲಿದ್ದಾರೆ, ಸುಳ್ಯ ನಗರಕ್ಕೆ ಸನಿಹದಲ್ಲಿರುವ ಈ ಪ್ರದೇಶ ಗಳಲ್ಲಿ ರಾತ್ರಿ ಯಾಗುತ್ತಲೇ ಆನೆ ಸಂಚಾರ ಶುರು ವಾಗುತ್ತಿದ್ದು ಕ್ರಮ ಕೈಗೊಳ್ಳುವಂತೆ ಮತ್ತು ಕೃಷಿ ನಾಶ ಹೊಂದಿದವರಿಗೆ ಪರಿಹಾರ ನೀಡುವಂತೆ ನಿಯೋಗ ಸ್ಪೀಕರ್ ಯು. ಟಿ. ಖಾದರ್ ರವರಿಗೆ ಮನವಿ ಸಲ್ಲಿಸಲಾಯಿತು. ತಕ್ಷಣ ಸ್ಪಂದಿಸಿದ ಸ್ಪೀಕರ್ ರವರು ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಯವರಿಗೆ ಮಾತನಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್ ರವರು ಡಿಸಿಎಫ್ ರವರೊಂದಿಗೆ ಮಾತನಾಡಿದಾಗ ರೇಡಿಯೋ ಕಾಲರ್ ಅಳವಡಿಸುವ ಬಗ್ಗೆ ಮತ್ತು ಎಟಿಎಫ್ ಆನೆ ನಿಗ್ರಹ ವಿಶೇಷ ಕಾರ್ಯ ಪಡೆ ಯ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಪೆರಾಜೆ ಪ್ರಭಾಕರ್ ರೈ, ಸುಳ್ಯ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ಆಸಿಫ್ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *