ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ “ಆಟಿಲಿ ಒಂದ್ ದಿನ” ಕಾರ್ಯಕ್ರಮ ಅರಂಬೂರಿನ ಮೂಕಾಂಬಿಕಾ ಭಜನಾ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ವಾಸುದೇವ ಗೌಡ ಕುಡೆಕಲ್ಲು ಅವರು ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಸಂಘಟನೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಆಟಿ ಎನ್ನುವಂತದ್ದು ಹಿಂದೆ ಬಹಳ ಕಷ್ಟಕರವಾದ ದಿನವಾಗಿತ್ತು. ಇಂತಹ ಕಷ್ಟಕರವಾದ ದಿನಗಳಲ್ಲೂ ನಮ್ಮ ಪೂರ್ವಜರು ಯಾವ ರೀತಿಯಲ್ಲಿ ಜೀವನ ನಡೆಸಿದರು ಎನ್ನುವುದನ್ನು ಮುಂದಿನ ಪೀಳಿಗೆಗೆ ತಿಳಿ ಹೇಳುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳ ಅಗತ್ಯತೆ ಇದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಂಬೂರು ಗೌಡ ಪುರುಷ ಘಟಕ ಅಧ್ಯಕ್ಷ ಮನೋಹರ ಅರಂಬೂರು ಅವರು ಮಾತನಾಡಿ ನಮ್ಮ ಆಚಾರ ವಿಚಾರ ಸಂಪ್ರದಾಯವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಗ್ರಾಮ ಗೌಡ ಸಮಿತಿಯ ಅಧ್ಯಕ್ಷ ಸತೀಶ್ ಕೊಯಿಂಗಾಜೆ, ಆಲೆಟ್ಟಿ ಗ್ರಾಮ ಗೌಡ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕೋಲ್ಚಾರು, ಅರಂಬೂರು ಗೌಡ ಮಹಿಳಾ ಘಟಕದ ಅಧ್ಯಕ್ಷೆ ಡಾ. ಅನುರಾಧಾ ಕುರುಂಜಿ, ಶ್ರೀಮತಿ ಯಶೋಧ ಪದ್ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿಶೇಷತೆ:

  • ಸಮುದಾಯದವರಿಗೆ
    ವಿವಿಧ ಸ್ಪರ್ಧೆಗಳನ್ನು ವಸಂತ ಅಮೆಚೂರು ಅವರು ನಡೆಸಿಕೊಟ್ಟರು.
  • ಸೇರಿದ ಸರ್ವರಿಗೂ ಡಾ. ಅನುರಾಧಾ ಕುರುಂಜಿಯವರು ಮನರಂಜನಾ ಆಟಗಳನ್ನು ಆಡಿಸಿ ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರು ಕೂಡ ದಿನವಿಡೀ ಸಂಭ್ರಮಿಸಿದರು.
  • ⁠ಅರಂಬೂರು ವಲಯದ ಸುಮಾರು 105 ಮನೆಗಳಿಂದ 300ಕ್ಕೂ ಮಿಕ್ಕಿ ಸ್ವಜಾತಿ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
  • ⁠ಸುಮಾರು 34 ಮನೆಯಿಂದ 40ಕ್ಕೂ ಮಿಕ್ಕಿ ಆಟಿಯ ಖಾದ್ಯಗಳ ಮೇಳ ನಡೆಯಿತು.
  • ⁠ಸುಮಾರು 30 ಕ್ಕೂ ಮಿಕ್ಕಿ ಕುಟುಂಬದಿಂದ ಗಂಡ- ಹೆಂಡತಿ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದುದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.

ಕಾರ್ಯಕ್ರಮದ ಆರಂಭಡಲ್ಲಿ ಕು. ಸಂಜನಾ ಬದಿಕಾನ ಪ್ರಾರ್ಥಿಸಿ, ತೇಜಸ್ ಚಿದ್ಗಲ್ ಸ್ವಾಗತಿಸಿ, ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಂಬೂರು ಗೌಡ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀಮತಿ ವೇದಾವತಿ ನೆಡ್ಚಿಲು ವಂದಿಸಿ, ಅಶೋಕ ಪೀಚೆ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭ:

ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅರಂಬೂರು ಗೌಡ ಮಹಿಳಾ ಘಟಕದ ಅಧ್ಯಕ್ಷೆ ಡಾ. ಅನುರಾಧಾ ಕುರುಂಜಿಯವರು ವಹಿಸಿದ್ದರು. ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಇಂತಹ ಕಾರ್ಯಕ್ರಮಗಳು ಕೇವಲ ಆಚರಣೆಗೆ ಸೀಮಿತವಾಗದೇ ಅದರ ಮಹತ್ವವನ್ನು ಇಂದಿನ ಪೀಳಿಗೆಗೆ ತಿಳಿಹೇಳಬೇಕಾದ ಅಗತ್ಯತೆ ಇದೆ. ಮಕ್ಕಳು ಹಾಗೂ ಯುನ ಜನಾಂಗ ಇಂತಹ ಕಾರ್ಯಕ್ರಮದಲ್ಲಿ ಹೆಚ್ಚೆಚ್ಚು ಭಾಗವಹಿಸಿದಾಗ ನಮ್ಮ ಸಂಸ್ಕೃತಿ, ಆಚಾರ ವಿಚಾರ ಉಳಿಸಲು ಸಾಧ್ಯ ಎಂದರು. ಮುಖ್ಯ ಅತಿಥಿಯಾಗಿ ಭಾಗಗವಹಿಸಿದ್ದ ಸುಳ್ಯ ಗೌಡ ಯುವ ನೇವಾ ಸಂಘದ ಉಪಾಧ್ಯಕ್ಷ ಯತಿರಾಜ್ ಭೂತಕಲ್ಲು ಮಾತನಾಡಿ ಸಂಘದ ಕಾರ್ಯ ವೈಖರಿಯನ್ನು ಶ್ಲಾಘಿಸುವುದರೊಂದಿಗೆ ಗೌಡ ಸಂಸ್ಕೃತಿಯ ವಿಶೇಶತೆಯನ್ನು ತಿಳಿಸಿದರು. ವೇಡಿಕೆಯಲ್ಲಿ ಅರಂಬೂರು ಗೌಡ ಪುರುಷ ಘಟಕದ ಅಧ್ಯಕ್ಷ ಮನೋಹರ ಅರಂಬೂರು, ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷ ಪರಮೇಶ್ವರ ನೆಡ್ಚಿಲ್ ಉಪಸ್ಥಿತರಿದ್ದರು. ಅರಂಬೂರು ಗೌಡ ಮಹಿಳಾ ಘಟಕದ ಗೌರವ ಸಲಹೆಗಾರರಾದ ಹಾರಾವತಿ ಕುಡೆಕಲ್ಲು ಸ್ವಾಗತಿಸಿ, ಅರಂಬೂರು ಗೌಡ ಪುರುಷ ಘಟಕದ ಕಾರ್ಯದರ್ಶಿ ಗಂಗಾಧರ ನೆಡ್ಚಿಲ್ ವಂದಿಸಿ, ರಾಜೀವಿ ಜನಾರ್ದನ ಪಾಲಡ್ಕ ಕಾರ್ಯಕ್ರಮ ನಿರೂಪಿಸಿದರು. ಚಂದ್ರಾವತಿ ಬದಿಕಾನ ಮತ್ತು ಪುಷ್ಪಾವತಿ ಕುಡೆಕಲ್ಲು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.

Leave a Reply

Your email address will not be published. Required fields are marked *