ಅರಂಬೂರು: ಇಲ್ಲಿನ ಸರಳಿಕುಂಜ ನಿವಾಸಿ ವಿಠಲ ರವರ ಮಗ ಪುನೀತ್ ಎಂಬ ಯುವಕನ ಮೇಲೆ ರಾತ್ರಿ ಯುವಕರ ತಂಡವೊಂದು ತಲ್ವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದೆ. ರಾತ್ರಿ ಸುಮಾರು ಗಂಟೆ 9.30pm ರ ವೇಳೆಗೆ ಈ ದಾಳಿ ನಡೆಸಲಾಗಿದೆ.
ಅರಂಬೂರಿನಲ್ಲಿರುವ ಪುನೀತ್ ಮನೆಗೆ ನಾಲ್ವರು ಯುವಕರು ಬೈಕಿನಲ್ಲಿ ಬಂದಯ ಏಕಾಏಕಿಯಾಗಿ ಹಲ್ಲೆ ನಡೆಸಿದ್ದಾರೆ. ತಲೆಯ ಭಾಗಕ್ಕೆ ಏಟಾಗಿದ್ದು ಪುನೀತ್ ರವರನ್ನು ಸುಳ್ಯ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಸುಳ್ಯ ಪೊಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ ಆರೋಪಿಗಳ ಪೈಕಿ ಮನೋಜ್, ಚೈತ್ರೆಶ್, ಶ್ರೀಜಿತ್ ಉಪ್ಪಳ ಎಂಬವರ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
