ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಕಾಲೇಜಿನ ಸಂಚಾಲಕ ಕೆ.ಆರ್.ಗಂಗಾಧರ್ ಧ್ವಜಾರೋಹಣ ನೆರವೇರಿಸಿ, ಸ್ವಾಂತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು.
ಅನಂತರ ಸಭಾ ಕಾರ್ಯಕ್ರಮದಲ್ಲಿ ದೇಶದ ಸೈನ್ಯದಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ಸೈನಿಕ ಮಹೇಶ್ ದೀಟಿಕೆ ಅವರನ್ನು ಸನ್ಮಾನಿಸಲಾಯಿತು.ಹಾಗೆಯೇ ಸಂಸ್ಥೆ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 28 ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿಯ ನಿರ್ದೇಶಕ ಮತ್ತು ನಿವೃತ್ತ ದೈಹಿಕ ಶಿಕ್ಷಕ ವಸಂತ್ ಎ.ಸಿ.ವಹಿಸಿದ್ದರು.ಶಾಲೆಯ ಮುಖ್ಯೋಪಾಧ್ಯಾಯರಾದ ಸೋಮಶೇಖರ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿ ಕು.ಅಮೃತ ಸ್ವಾತಂತ್ರ್ಯ ಕುರಿತು ಭಾಷಣ ಮಾಡಿದರು.ಪ್ರಭಾರ ಪ್ರಾಂಶುಪಾಲರಾದ ಸುರೇಶ್ ವಾಗ್ಲೆ ವಂದಿಸಿದರು.ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು.ಕಿಶೋರ್ ಕುಮಾರ್, ಪದ್ಮಕುಮಾರ್ ಸಹಕರಿಸಿದರು.ಭಾಗ್ಯಶ್ರೀ, ಮನೋಜ್ ಕುಮಾರ್, ಸಂದೇಶ್, ಶ್ರೀಲತಾ ನೇತೃತ್ವದಲ್ಲಿ ದೇಶಭಕ್ತಿ ಗೀತೆಗಳ ಗಾಯನ, ನೃತ್ಯಗಳು, ನಾಟಕಗಳ ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ನಡೆಯಿತು.ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ಹಿರಿಯ ವಿದ್ಯಾರ್ಥಿಗಳಾದ ಜಯಂತ್.ಡಾ.ನಿತೀನ್ ಪ್ರಭು,ಧನ್ಯರಾಜ್ ಮತ್ತು ಸದಾನಂದ ದೇರಾಜೆ ಮಧ್ಯಾಹ್ನದ ಸಿಹಿ ಭೋಜನಕ್ಕೆ ಸಂಸ್ಥೆಯ ಪೂರ್ವಾಧ್ಯಕ್ಷರಾದ ದಿವಂಗತ ಕೃಷ್ಣಪ್ಪ ಅಳಿಕೆ ಧರ್ಮಪತ್ನಿ ಚಂದ್ರಾವತಿ ಅಳಿಕೆ ಹಾಗೂ ಸುಳ್ಯದ ಅಬ್ದುಲ್ ಬಶೀರ್ ಸಹಕರಿಸಿದರು.
