ಅರಂತೋಡು: ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 17 ನೇ ವಿಶೇಷ ವಾರ್ಷಿಕ ಶಿಬಿರ ಚೆಂಬು ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.”ನಶಾ ಮುಕ್ತ ಭಾರತ ಅಭಿಯಾನ” ಘೋಷ ವಾಕ್ಯದಡಿಯಲ್ಲಿ ಶಿಬಿರ ಆಯೋಜಿಸಲಾಗಿತ್ತು. ಸ್ಥಳೀಯ ಪ್ರಗತಿಪರ ಕೃಷಿಕರಾದ ಶ್ರೀ ಚಂದ್ರಶೇಖರ್ ಹೊಸೂರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಚೆಂಬು ಗ್ರಾಮ ಪಂಚಾಯತ್ ಅಧ್ಯಕ್ಷ ತೀರ್ಥರಾಮ ಪೂಜಾರಿಗದ್ದೆ, ಚೆಂಬು ಸರ್ಕಾರಿ ಪ್ರೌಢಶಾಲೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಕುಮಾರ್, ಮುಖ್ಯಗುರು ಡಾ.ಯೋಗೀಶ್ ಬಿ ಎಸ್, ಶಾಲಾ ಅಭಿವೃದ್ಧಿ ಸಮಿತಿಯ ನಾಮ ನಿರ್ದೇಶಿತ ಸದಸ್ಯ ಶಿವಪ್ರಸಾದ್.ಹೆಚ್.ಟಿ. ಕಾಲೇಜಿನ ಮುಖ್ಯಗುರು ಸೋಮಶೇಖರ ಪಿ. ಉಪಸ್ಥಿತರಿದ್ದರು.ಕಾಲೇಜಿನ ಸಂಚಾಲಕ ಕೆ.ಆರ್. ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು.ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಸ್ವಾಗತಿಸಿದರು.ಕಾರ್ಯಕ್ರಮ ಅಧಿಕಾರಿ ಲಿಂಗಪ್ಪ ಎಂ ವಂದಿಸಿದರು.ಉಪನ್ಯಾಸಕ ಮೋಹನ್ ಚಂದ್ರ ನಿರೂಪಿಸಿದರು.

ಶಿಬಿರದ ಧ್ವಜಾರೋಹಣ ಕಾರ್ಯಕ್ರಮವನ್ನು ಸ್ಥಳೀಯರಾದ ದಿನೇಶ್ ಸಣ್ಣಮನೆ, ಉಪನ್ಯಾಸಕ ಚಂದ್ರಶೇಖರ, ಚಂದ್ರಶೇಖರ್ ಹೊಸೂರು, ಲಿಂಗಪ್ಪ ,ಪಿ.ಬಿ., ಜಯಂತಿ ಎಂ ಎಸ್, ಸುರೇಶ್ ವಾಗ್ಲೆ ನೆರವೇರಿಸಿದರು.
ಶ್ರಮದಾನದ ಮೂಲಕ ಶಾಲಾ ಪರಿಸರ ಸ್ವಚ್ಛತೆ, ಶಾಲೆಯ ಕೈತೋಟ ನಿರ್ಮಾಣ ಕಾರ್ಯ, ಶಾಲೆಗೆ ಬರುವ ದಾರಿಯನ್ನು ಸ್ವಚ್ಛತೆ ಮಾಡಿದರು.ಶೈಕ್ಷಣಿಕ ತರಬೇತಿ ಕಾರ್ಯಕ್ರಮದಲ್ಲಿ “ಕಮ್ಯುನಿಕೇಷನ್ ಇಂಗ್ಲೀಷ್” ಕುರಿತು ನಿವೃತ್ತ ಮುಖ್ಯಗುರು ಚಿದಾನಂದ ಯು.ಎಸ್ ,”ನಿತ್ಯ ಜೀವನದಲ್ಲಿ ಆರೋಗ್ಯ ರಕ್ಷಣೆ”ಯ ಕುರಿತು ಡಾಕ್ಟರ್ ಶಶಾಂಕ್ ರೈ.ಕೆ.ಬಿ.,”ರಂಗ ಕಲೆಯೊಂದಿಗೆ ವಿದ್ಯಾರ್ಥಿಗಳ ಒಡನಾಟ” ಕುರಿತು ಲೋಕೇಶ್ ಊರುಬೈಲು,”ಸಾಹಿತ್ಯದೊಂದಿಗೆ ವಿದ್ಯಾರ್ಥಿಗಳ ಒಡನಾಟ ಹೇಗಿರಬೇಕು?” ಕುರಿತು ಸಂಗೀತ ರವಿರಾಜ್ ಹೊಸೂರು ಮತ್ತು ಸಾವಯವ ಕೃಷಿ ಮತ್ತು ಅಸ್ತ್ರ ಒಲೆಯ ತಯಾರಿಕೆ ಕುರಿತು ಡಾ.ಕರುಣಾಕರ ನಿಡಿಂಜಿ ಮಾರ್ಗದರ್ಶನ ನೀಡಿದರು.

ನಶಾ ಮುಕ್ತ ಭಾರತ ಅಭಿಯಾನ ಅಂಗವಾಗಿ ಶಾಲೆಯ ಸುತ್ತ ಮುತ್ತ ಜಾಗೃತಿ ಜಾಥಾ ಮತ್ತು ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಪಕ್ಕ ದುಷ್ಟಚಟಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಬೀದಿ ನಾಟಕವನ್ನು ಶಿಬಿರಾರ್ಥಿ ಕುಮಾರಿ ಗ್ರೀಷ್ಮ ನೇತೃತ್ವದಲ್ಲಿ ಪ್ರದರ್ಶನ ನಡೆಯಿತು.ಇನ್ನೂ ಎನ್ಎಸ್ಎಸ್ ನಡಿಗೆ ಕೃಷಿಯ ಕಡೆಗೆ ಅನ್ನುವ ಕಾರ್ಯಕ್ರಮದಡಿಯಲ್ಲಿ ಪ್ರಗತಿಪರ ಕೃಷಿಕರಾದ ಚಂದ್ರಶೇಖರ್ ಹೊಸೂರು ಕೃಷಿ ತೋಟಕ್ಕೆ ಭೇಟಿ ನೀಡಿ ಶಿಬಿರಾರ್ಥಿಗಳು ಕೃಷಿಯ ಮಹತ್ವವನ್ನು ತಿಳಿದುಕೊಂಡರು.

ಶಿಬಿರದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು,ಸ್ಥಳೀಯ ಶಾಲಾ ಮಕ್ಕಳು, ಸಂಘ ಸಂಸ್ಥೆಗಳ ಸದಸ್ಯರು , ಅಪ್ಪು ಮೆಲೋಡಿಸ್ ತಂಡ ಮತ್ತು ಶ್ರೀದೇವಿ ಭಜನಾ ಮಂಡಳಿ ಕುದುರೆ ಪಾಯ ಭಜನೆ ಸೇರಿದಂತೆ ವಿವಿಧ ಮನೋರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.ಶಿಬಿರಾಗ್ನಿ, ಶಿಬಿರ ಜ್ಯೋತಿ ಮತ್ತು ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮದಲ್ಲಿ ಹಿರಿಯರಾದ ಚಂದ್ರಶೇಖರ ಹೊಸೂರು, ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ, ಸ್ಥಳೀಯರಾದ ಪದ್ಮನಾಭ , ಆನಂದ , ಸ್ಥಳೀಯ ಶಾಲೆಯ ಮುಖ್ಯಗುರು ಡಾ.ಯೋಗೀಶ್ ಉಪಸ್ಥಿತರಿದ್ದರು. ಶಿಬಿರಾಧಿಕಾರಿ ಲಿಂಗಪ್ಪ ಎಂ. ಪ್ರತಿಜ್ಞಾ ವಿಧಿ ಬೋಧಿಸಿದರು. ಉಪನ್ಯಾಸಕ ಮೋಹನ್ ಚಂದ್ರ ನಿರೂಪಿಸಿದರು.

ಸಮಾರೋಪ ಸಮಾರಂಭ: ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಭಾಷಣವನ್ನು ಅರಂತೋಡು -ತೊಡಿಕಾನ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮಾಡಿದರು. ಮುಖ್ಯ ಅತಿಥಿಗಳಾಗಿ ಚೆಂಬು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಶಾರದಾ ಸೂರ್ಯ, ಗ್ರಾ. ಪಂ. ಸದಸ್ಯರಾದ ಶ್ರೀಮತಿ ರಾಧಾ ಚಂಗಪ್ಪ ಉಪಸ್ಥಿತರಿದ್ದರು. ಶಿಬಿರಕ್ಕೆ ಸಹಕರಿಸಿದ ಅಕ್ಷರ ದಾಸೋಹ ನೌಕರರಾದ ತಿಲಕ ಮತ್ತು ಕಮಲರನ್ನು ಶಾಲು ಹೊದಿಸಿ, ಕಿರುಕಾಣಿಕೆ ನೀಡಿ ಗೌರವಿಸಲಾಯಿತು.ಶಿಬಿರದಲ್ಲಿ ‘ಬೆಸ್ಟ್ ಪಾರ್ಟಿಸಿಪೇಷನ್ ‘ ಪುರಸ್ಕಾರವನ್ನು ಕುಮಾರಿ ಗ್ರೀಷ್ಮ, ಅತ್ಯುತ್ತಮ ಶಿಬಿರಾರ್ಥಿ ಪ್ರಶಸ್ತಿಯನ್ನು ಸುಬ್ರಹ್ಮಣ್ಯ ಮತ್ತು ಕುಮಾರಿ ಅಮೃತ ಪಡೆದುಕೊಂಡರು. ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಅಧ್ಯಕ್ಷತೆ ವಹಿಸಿದ್ದರು.65 ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಶಿಬಿರದ ಯೋಗ, ಧ್ಯಾನ ಪ್ರಾಣಾಯಾಮ ತರಬೇತಿಯನ್ನು ಸುರೇಶ್ ವಾಗ್ಲೆ ನಡೆಸಿಕೊಟ್ಟರು.ಶಿಬಿರಕ್ಕೆ ಸ್ಥಳೀಯ ಸಂಸ್ಥೆಗಳು , ದಾನಿಗಳು, ಸಹಕರಿಸಿದರು. ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ವೈದ್ಯಕೀಯ ಸಹಕಾರ ನೀಡಿದರು.ಶಾಲಾ ಅಕ್ಷರ ದಾಸೋಹ ಸಿಬ್ಬಂದಿ ತಿಲಕ ಮತ್ತು ಕಮಲ ಅಡುಗೆ ಕಾರ್ಯದಲ್ಲಿ ಸಹಕರಿಸಿದರು. ಶಿಬಿರಾಧಿಕಾರಿ ಲಿಂಗಪ್ಪ.ಎಂ. ಸಹಾಯಕ ಶಿಬಿರಾಧಿಕಾರಿ ಭಾಗ್ಯಶ್ರೀ, ಮೋಹನ್ ಚಂದ್ರ , ಪದ್ಮಕುಮಾರ್,ಚಂದ್ರಶೇಖರ್, ಕಿಶೋರ್ ಕುಮಾರ್,ಸಂದೇಶ್, ವಿನುತಾ , ನಂದಿನಿ, ಶಾಂತಿ, ಅಶ್ವಿನಿ,,ವಿನುತಾ , ನಂದಿನಿ, ಶಾಂತಿ, ಅಶ್ವಿನಿ, ಶಾರೀಕ ತಸ್ನಿಮಾ,ಸೌಮ್ಯ .ಕೆ , ಮಮತ ಶ್ರೀಲತಾ,ದಿವ್ಯ,ಬೃಂದಾ, ಧನ್ಯರಾಜ್, ವಿಜಯ್, ಚಂದ್ರಶೇಖರ್, ಚಿದಾನಂದ, ಸಹಕರಿಸಿದರು.

ಶಿಬಿರದಲ್ಲಿ ಪ್ರಾರ್ಥನೆ , ಯೋಗ, ಧ್ಯಾನ, ಧ್ವಜಾರೋಹಣ, ಶ್ರಮದಾನ, ಶೈಕ್ಷಣಿಕ ತರಬೇತಿ, ಸಾಮೂಹಿಕ ಭೋಜನ, ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು,
ಶಿಬಿರವಾಣಿ ರಚನೆ, ಶಿಬಿರ ಜ್ಯೋತಿ, ಶಿಬಿರಾಗ್ನಿ, ನಶಾ ಮುಕ್ತ ಭಾರತ ಅಭಿಯಾನ ಜಾಥಾ,ಬೀದಿ ನಾಟಕ ಪ್ರದರ್ಶನ, ಎನ್ಎಸ್ಎಸ್ ನಡಿಗೆ ಕೃಷಿಯ ಕಡೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ವೇದಿಕೆ ಕಲ್ಪಿಸಿತು.

Leave a Reply

Your email address will not be published. Required fields are marked *