Nammasullia: ಅಸ್ತ್ರ ಸ್ಪೋರ್ಟ್ಸ್ ಕ್ಲಬ್ (ರಿ)ಪೈಚಾರ್ 79ನೇ ಸ್ವಾತಂತ್ರೋತ್ಸವ ಹಾಗೂ ಅದ್ದೂರಿ ಸನ್ಮಾನ ಕಾರ್ಯಕ್ರಮವು ಆ. ೧೫ ರಂದು ಪೈಚಾರ್ ಜಂಕ್ಷನ್ ನಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ 8:30ಕ್ಕೆ ಸಂಘಟನೆಯ ಅಧ್ಯಕ್ಷರಾದ ರಿಫಾಯಿ ಧ್ವಜಾರೋಹಣ ನೆರೆವೆರಿಸಿದರು. ಮಧ್ಯಾಹ್ನ 2:00 ಗಂಟೆಗೆ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಹಮೀದ್ ಕೂತಮೊಟ್ಟೆ ವಹಿಸಿದರು. ಇದೇ ಸಂದರ್ಭದಲ್ಲಿ ಖ್ಯಾತ ಹಿರಿಯ ವೈದ್ಯರಾದ ಡಾ. ಶಂಕರ್ ಭಟ್ ,ನಿವೃತ್ತ ಹಿರಿಯ ಅಧ್ಯಾಪಕರಾದ ಸುಂದರ ಗೌಡ, ದೈಹಿಕ ಶಿಕ್ಷಣ ಶಿಕ್ಷಕರಾದ ರಘುನಾಥ್ ಸರ್ ಹಾಗೂ ಪೈಚಾರಿನ ಲೈನ್ ಮೆನ್ ಸಂತೋಷ್ ಎಮ್ ಇವರಿಗೆ ತಮ್ಮ ಸಾಧನೆಯನ್ನು ಗುರುತಿಸಿ ಅದ್ದೂರಿ ಸನ್ಮಾನವನು ನಿವೃತ್ತ ಪ್ರಾಂಶುಪಾಲರಾದ ಉಮ್ಮರ್ ಜಿ ನಿರ್ವಹಿಸಿದರು. ವೇದಿಕೆಯಲ್ಲಿ ಸುಳ್ಯ ನಗರ ಯೋಜನ ಪ್ರಾಧಿಕಾರದ (ಸೂಡ)ಅಧ್ಯಕ್ಷರಾದ ಮುಸ್ತಫ ಜೆ.ಎಸ್, ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಆರ್ತಾಜೆ, ಬದ್ರಿಯಾ ಜುಮ್ಮಾ ಮಸ್ಟಿದ್ ಪೈಚಾರ್ ಅಧ್ಯಕ್ಷರಾದ ಇಬ್ರಾಹಿಂ ಪಿ, ಶಾಂತಿನಗರ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ನಝೀರ್ ಶಾಂತಿನಗರ, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಶೀರ್ ಆರ್.ಬಿ, ಅಲ್- ಅಮೀನ್ ಯೂತ್ ಸೆಂಟರ್ ಅಧ್ಯಕ್ಷ ಸತ್ತಾರ್ ಪಿ.ಎ, ಪಿ.ಎಂ ಕಾಂಪ್ಲೆಕ್ಸ್ ಮಾಲಕ ಮಧುಸೂದನ್, ನ್ಯಾಯವಾದಿ ಮೂಸಾ ಪೈಂಬಚ್ಚಾಲ್, ಹಿರಿಯ ಮುಳುಗು ತಜ್ಞ ಲತೀಫ್ ಬಿ.ಎಲ್ ಮೊದಲಾದವರು ಉಪಸ್ಥಿತರಿದ್ದರು. ಮೆಸ್ಕಾಂ ಲೈನ್ ಮ್ಯಾನ್ ಸಂತೋಷ್ ಅದ್ಭುತ ಹಾಡು ಹಾಡಿ ಸಭಿಕರನ್ನು ಮನರಂಜಿಸಿದರು. ಸಾರ್ವಜನಿಕರಿಗೆ ಸಂಘಟನೆಯ ವತಿಯಿಂದ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಯಿತು. ಹಾಗೂ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು. ಕಾರ್ಯಕ್ರಮವನ್ನು ಬಶೀರ್ ಅರ್.ಬಿ ಸ್ವಾಗತಿಸಿ,ನಿರೂಪಿಸಿ, ನಾಸೀರ್ ಕೆ.ಪಿ ವಂದಿಸಿದರು.
