ಸುಳ್ಯ: ದೇಶದಾದ್ಯಂತ 79 ನೇ ಸ್ವಾತಂತ್ರ್ಯೋತ್ಸವ ಅತ್ಯಂತ ಸಡಗರ ದಿಂದ ಆಚರಿಸಲಾಯಿತು. ಈ ಹಿನ್ನಲೆಯಲ್ಲಿ ಆ.15 ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸುಳ್ಯ ಆಟೋ ಚಾಲಕರಿಂದ ಸುಳ್ಯದ ಪ್ರಮುಖ ಬೀದಿಗಳಲ್ಲಿ ಆಟೋ ಜಾಥಾ ಹಮ್ಮಿಕೊಳ್ಳಲಾಗಿತ್ತು. ಸುಳ್ಯದ ಪರಿವಾರಕಾನದಿಂದ ಹೊರಟ ಈ ರಿಕ್ಷಾ ಜಾಥಾ ಸುಳ್ಯದ ಕ್ಯಾಂಪಸ್ ಮೂಲಕ ಸಾಗಿ ಪೈಚಾರಿನ ವರೆಗೆ ತಲುಪಿತು. ನಂತರ ಅಲ್ಲಿಂದ ಹಿಂತಿರುಗಿ ಸುಳ್ಯದ ಪ್ರಮುಖ ಬೀದಿಗಳಲ್ಲಿ ಸಂಚಾರಿಸಿ ಸುಳ್ಯದ ಕಫೆ ಕಾಫಿ ಡೇ ಯಲ್ಲಿ ಕೊನೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯದ ಅನೇಕ ಆಟೋ ಚಾಲಕ ಮಾಲಕರು ಜೊತೆಗೂಡಿ ಜಾಥಾ ಯಶಸ್ವಿಗೊಳಿಸಿದರು.
