ಅಲ್ ಅಮೀನ್ ಯೂತ್ ಸೆಂಟರ್ (ರಿ) ಪೈಚಾರ್ ‌ಇದರ ವತಿಯಿಂದ 79ನೇ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮವು ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಕಛೇರಿಯ ಮುಂಭಾಗದಲ್ಲಿ ಅಗಸ್ಟ್ 15 ರಂದು ನಡೆಯಿತು. ಖುವ್ವತ್ತುಲ್ ಇಸ್ಲಾಂ ಮದರಸದ ಸದರ್ ಮುಅಲ್ಲಿಮ್’ರಾದ ಫೈಝಲ್ ಸಖಾಫಿ ದುಆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು
ನೀಡಿದರು. ಧ್ವಜಾರೋಹಣವನ್ನು ಅಲ್ ಅಮೀನ್ ಯೂತ್ ಸೆಂಟರ್ ಇದರ ಮಾಜಿ‌ ಅಧ್ಯಕ್ಷರಾದ ಲತೀಫ್ ಪಿಕೆಯವರು ನೆರವೇರಿಸಿದರು. ಅಲ್ ಅಮೀನ್ ‌ಯೂತ್ ಸೆಂಟರ್ ಇದರ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಪಿಎ ಇವರು ಅಧ್ಯಕ್ಷತೆ ವಹಿಸಿದ್ದರು. ಈ‌ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬದ್ರಿಯ ಜುಮ್ಮಾ ಮಸ್ಜಿದ್ ‌ಖತೀಬರಾದ ಶಮೀರ್ ಅಹ್ಮದ್ ನಹೀಮಿಯವರು ಸ್ವಾತಂತ್ರ್ಯವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಜೆಎಮ್ ಇದರ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಪಿ, ಉಪಾಧ್ಯಕ್ಷರಾದ ಇಬ್ರಾಹಿಂ ಎಸ್ ಎ, ಜಮಾಅತ್ ಕಾರ್ಯದರ್ಶಿ ಹನೀಫ್ ಪಿಕೆ, ಜಾಲ್ಸೂರು ಗ್ರಾಮ ಪಂಚಾಯತಿ ಸದಸ್ಯರಾದ ಮುಜೀಬ್ ಪೈಚಾರ್, ಮುಅಲ್ಲಿಮ್’ಗಳಾದ ಹನೀಫ್ ಮದನಿ ಮಂಡೆಕೋಲು, ಜಝೀರ್ ಸಖಾಫಿ ವಿರಾಜಪೇಟೆ, ಅಲ್ ಅಮೀನ್ ‌ಯೂತ್ ಸೆಂಟರ್ ‌ ಉಪಾಧ್ಯಕ್ಷರಾದ ಹನೀಫ್ ಅಲ್ಫಾ,
ಹಾಗೂ ಅಲ್ ಯೂತ್ ಸೆಂಟರ್ ಪೈಚಾರ್ ಇದರ ಎಲ್ಲಾ ಸದಸ್ಯರುಗಳು ‌ಹಾಗೂ‌ ಸ್ಥಳೀಯರು ಭಾಗವಹಿಸಿದ್ದರು.
ಅಲ್ ಅಮೀನ್ ‌ಯೂತ್ ಸೆಂಟರ್ ಪೈಚಾರ್ ಇದರ ಕಾರ್ಯದರ್ಶಿ ಅಬೂಸಾಲಿ ಕೆಪಿ ಇವರು ಸ್ವಾಗತಿಸಿ ‌ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *