ಸುಳ್ಯ: ಇಲ್ಲಿನ ಪೈಚಾರ್ ಅಲ್ – ಅಮೀನ್ ಯೂತ್ ಸೆಂಟರ್ (ರಿ) ಇದರ ಆಶ್ರಯದಲ್ಲಿ ಮುಂಬರುವ ಪವಿತ್ರ ರಂಜಾನ್ ತಿಂಗಳ ಪ್ರಯುಕ್ತ ಮಹಿಳೆಯರಿಗಾಗಿ ವಿಶೇಷ ಅಧ್ಯಯನ ತರಗತಿಯನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವು ಇದೇ ಫೆಬ್ರವರಿ 17ರ ಮಂಗಳವಾರದಂದು ಬೆಳಿಗ್ಗೆ 10 ಗಂಟೆಗೆ ಪೈಚಾರ್‌ನ ಖುವ್ವತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಲಿದೆ.
ಅಡ್ಕಾರ್ ಜುಮಾ ಮಸೀದಿಯ ಖತೀಬರಾದ ಬಹು| ಮುನೀರ್ ಸಅದಿ ಅಲ್ ಅರ್ಷದಿ ಅವರು ಈ ಅಧ್ಯಯನ ತರಗತಿಯನ್ನು ನಡೆಸಿಕೊಡಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




