ಅಸ್ತ್ರ ಆರ್ಟ್ & ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಹಾಗೂ ಸುಳ್ಯ ಬ್ಯಾಡ್ಮಿಂಟನ್ ಕ್ಲಬ್ (SBA) ಇದರ ಸಹಭಾಗಿತ್ವದಲ್ಲಿ ಸುಳ್ಯ, ಪುತ್ತೂರು, ಕಡಬ ವಿಧಾನಸಭಾ ಕ್ಷೇತ್ರದ ಆಹ್ವಾನಿತ 60 ಆಟಗಾರರ ಬ್ಯಾಡ್ಮಿಂಟನ್ ಪ್ರಿಮಿಯರ್ ಲೀಗ್ 2025 ‘ ಅಸ್ತ್ರ ಟ್ರೋಫಿ’ ಬ್ಯಾಡ್ಮಿಂಟನ್ ಪಂದ್ಯಾಕೂಟವು ಇದೇ ಬರುವ ದಿನಾಂಕ ಸೆಪ್ಟೆಂಬರ್ 14 ಆದಿತ್ಯವಾರ ಬೆಳಗ್ಗೆ 8:00 am ಗಂಟೆಗೆ ಎಸ್.ಬಿ.ಎ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಾಕೂಟದ
ಹರಾಜು ಪ್ರಕ್ರಿಯೆಯೂ ಈಗಾಗಲೇ ನಡೆದಿದ್ದು, ದಿ.14 ರಂದು ಪಂದ್ಯಾಟವು ನಡೆಯಲಿದೆ. ಒಟ್ಟು ಆರು ತಂಡಗಳು, 60 ಆಟಗಾರರು, ಐದು ವಿಭಾಗಗಳಲ್ಲಿ ಸೆಣೆಸಾಡಲಿದ್ದಾರೆ.


