
ಬೈತಡ್ಕ: ಪ್ರಸಿದ್ಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕೇಂದ್ರವಾದ ಬೈತಡ್ಕ ಮಖಾಂ ಶರೀಫ್‌ನಲ್ಲಿ ನಡೆಯಲಿರುವ ಉದಯಾಸ್ತಮಾನ ಉರೂಸ್ 2026 ಕಾರ್ಯಕ್ರಮವು 2026ರ ಏಪ್ರಿಲ್ 17ರಿಂದ 26ರವರೆಗೆ ಅದ್ದೂರಿಯಾಗಿ ಜರುಗಲಿದೆ.
ಉರೂಸ್ ಪ್ರಯುಕ್ತ ಹತ್ತು ದಿನಗಳ ಕಾಲ ಆಧ್ಯಾತ್ಮಿಕ ಪ್ರವಚನಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿಶೇಷ ಸಭೆಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ನಿರ್ಮಿಸಲಾದ “ಬೈತುಲ್ ಮಶೂರ್ ಹೌಸಿಂಗ್ ಪ್ರಾಜೆಕ್ಟ್” ಮನೆಗಳ ಕೀ ಹಸ್ತಾಂತರ ಕಾರ್ಯಕ್ರಮವೂ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳು ಬೈತಡ್ಕ ಜುಮಾ ಮಸೀದಿ ಮತ್ತು ದರ್ಗಾ ಶರೀಫ್‌ನ ಗೌರವಾಧ್ಯಕ್ಷರಾದ ಅಸ್ಸಯ್ಯಿದು ಕೆ.ಎಸ್. ಆಟ್ಟಕ್ಕೋಯ ತಂಙಳ್ ಕುಂಬೋಲ್ ಅವರ ಘನ ಅಧ್ಯಕ್ಷತೆಯಲ್ಲಿ ಜರುಗಲಿವೆ.
ಉರೂಸ್ ಕಾರ್ಯಕ್ರಮದ ಪೂರ್ವಭಾವಿಯಾಗಿ, ಬೈತಡ್ಕ ಉರೂಸ್ ಸಮಿತಿಯ ಪದಾಧಿಕಾರಿಗಳು ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ. ಉಸ್ತಾದ್ ಅವರನ್ನು ಭೇಟಿಯಾಗಿ ಉರೂಸ್ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಉಸ್ತಾದರು (ಇನ್ಶಾ ಅಲ್ಲಾಹ್) ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿ, ಉರೂಸ್ ಯಶಸ್ವಿಯಾಗಲೆಂದು ದುವಾ ಮಾಡಿದರು.
ಹತ್ತು ದಿನಗಳ ಕಾಲ ನಡೆಯುವ ಈ ಆಧ್ಯಾತ್ಮಿಕ ಸಂಗಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೀನಿ ಸ್ನೇಹಿಗಳು ಭಾಗವಹಿಸಬೇಕೆಂದು ಪ್ರೀತಿಯಿಂದ ಆಮಂತ್ರಿಸುತ್ತಿದ್ದೇವೆ.
ಇಂತಿ:
ಉದಯಾಸ್ತಮಾನ ಉರೂಸ್ ಸಮಿತಿ, ಬೈತಡ್ಕ





