ಬಳ್ಳಾರಿ: ಜಿಲ್ಲಾ ಪಂಚಾಯತ್ ಬಳ್ಳಾರಿ, ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ, ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ರಾಜ್ಯ ಮಟ್ಟದ 14 ಹಾಗೂ 17 ವರುಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಬಾಸ್ಕೆಟ್ಬಾಲ್ ಪಂದ್ಯಾಕೂಟವು ನ.15 ರಿಂದ ನ.17 ರ ತನಕ ನಂದಿ ಶಾಲೆ ಬಳ್ಳಾರಿಯಲ್ಲಿ ನಡೆಯಿತು.

17ವ ವಯೋಮಿತಿಯ ಬಾಲಕರ ಪಂದ್ಯಾಕೂಟದಲ್ಲಿ ಬೆಂಗಳೂರು ಚಾಂಪಿಯನ್ ಪಟ್ಟ ಅಲಂಕರಿಸಿದರೆ,

ರನ್ನರ್ ಅಪ್ ಪ್ರಶಸ್ತಿಯನ್ನು ಬೆಳಗಾವಿ ತಂಡ ತನ್ನದಾಗಿಸಿಕೊಂಡಿತು.

17 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಮೈಸೂರು ಪ್ರಥಮ ಹಾಗೂ

ವಿದ್ಯಾನಗರ ದ್ವಿತೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಇನ್ನೂ 14 ವರ್ಷ ವಯೋಮಾನದ ಬಾಲಕರ ಬಾಸ್ಕೆಟ್ಬಾಲ್ ಪಂದ್ಯಾಟದಲ್ಲಿ ಬೆಳಗಾವಿ ಪ್ರಥಮ,


ಹಾಗೂ ದ್ವಿತೀಯ ಮೈಸೂರು ಪ್ರಶಸ್ತಿ ಪಡೆದುಕೊಂಡಿತು.

ಬಾಲಕಿಯರ ವಿಭಾಗದಲ್ಲಿ ಮೈಸೂರು ಚಾಂಪಿಯನ್ ಹಾಗೂ ವಿದ್ಯಾನಗರ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
