ತೀವ್ರ ಕುತೂಹಲ ಕೆರಳಿಸಿದ್ದ ಬಿಗ್ ಬಾಸ್ ಸೀಸನ್ 12ಕ್ಕೆ ತೆರೆ ಬಿದ್ದಿದೆ. ಬಿಗ್‌ಬಾಸ್ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಅತೀ ಹೆಚ್ಚು ಮತಗಳನ್ನ ಪಡೆಯುವ ಮೂಲಕ ಗಿಲ್ಲಿ ನಟ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನೂ ಗಿಲ್ಲಿ ಬರೆದಿದ್ದಾರೆ. ಹಲವು ವಾರಗಳಿಂದ ಗಿಲ್ಲಿ ನಟನೇ ಬಿಗ್ ಬಾಸ್ ಗೆಲ್ಲೋದು ಅಂತ ಜನಾಭಿಪ್ರಾಯ ವ್ಯಕ್ತವಾಗಿತ್ತು, ಅದೂ ಈಗ ನಿಜವಾಗಿದೆ. ಬಿಗ್ ಬಾಸ್ ಫಿನಾಲೆಗೆ 6 ಸ್ಪರ್ಧಿಗಳು ಆಯ್ಕೆಯಾಗಿದ್ದರು. ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯ ಶೈವ, ರಘು ಹಾಗೂ ಧನುಷ್ ಫಿನಾಲೆಗೆ ಆಯ್ಕೆಯಾಗಿದ್ದರು. ಭಾನುವಾರ ನಡೆದ ಫಿನಾಲೆ ಕಾರ್ಯಕ್ರಮದಲ್ಲಿ 6ನೇ ಎಲಿಮಿನೇಟ್ ಆಗಿ ಧನುಷ್ ಹೊರ ಬಂದರು. ಆನಂತರ ರಘು ಬಿಗ್ ಬಾಸ್ ಮನೆಯಿಂದ ಆಚೆ ಬಂದರು. 4ನೇ ಕಂಟೆಸ್ಟೆಂಟ್ ಆಗಿ ಕಾವ್ಯ ಮನೆಯಿಂದ ಆಚೆ ಬಂದರು. ಅಲ್ಲಿಂದ ಫಿನಾಲೆ ಇನ್ನಷ್ಟು ರೋಚಕ ತಿರುವು ಪಡೆದುಕೊಂಡಿತ್ತು.

ನೋಡುಗರ ಅಭಿಪ್ರಾಯದಂತೆ ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ರಕ್ಷಿತಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮೂವರಲ್ಲಿ ಗೆಲ್ಲೋರು ಯಾರು? ಅನ್ನುವ ಚರ್ಚೆ ಜೋರಾಗಿತ್ತು. ಇತ್ತ ಮೂರು ಸ್ಪರ್ಧಿಗಳ ಅಭಿಮಾನಿಗಳಲ್ಲೂ ಎದೆಬಡಿತ ಹೆಚ್ಚಿಸಿತ್ತು. ಏನೇ ಚರ್ಚೆ ನಡೆದರೂ, ಗಿಲ್ಲಿ ನಟನೇ ಗೆಲ್ಲೋದು ಪಕ್ಕಾ ಅನ್ನುವ ಅಭಿಪ್ರಾಯ ವ್ಯಕ್ತವಾಯಿತು. ಕೊನೆಗೂ ಗಿಲ್ಲಿ ನಟನೇ ಟ್ರೋಫಿಗೆ ಮುತ್ತಿಕ್ಕಿ ವಿಜಯ ಮಾಲೆ ಧರಿಸಿದರು.
ಬಿಗ್ ಬಾಸ್ ಇತಿಹಾಸದಲ್ಲೇ ಈ ಪ್ರಮಾಣದಲ್ಲಿ ವೋಟುಗಳು ಬಂದಿರಲಿಲ್ಲ. ಕಳೆದ ಬಾರಿ ಹನುಮಂತ ಲಮಾಣಿಗೆ 5 ಕೋಟಿಗೂ ಅಧಿಕ ಮತಗಳು ಬಿದ್ದಿದ್ದವು. ಈ ಬಾರಿ ದಾಖಲೆಯ ರೀತಿಯಲ್ಲಿ ಮತದಾನ ಆಗಿದೆ. ಹಾಗಾಗಿ ಗಿಲ್ಲಿ ನಟ ಅಚ್ಚರಿ ಎನ್ನುವಂತೆ ಗೆಲುವು ಸಾಧಿಸಿದ್ದಾರೆ
