ಮೈಸೂರು ಅಗಸ್ಟ್ 31: ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸಸ್ 12 ರ ದಿನಾಂಕವನ್ನು ಕಿಚ್ಚ ಸುದೀಪ್ ಘೋಷಿಸಿದ್ದಾರೆ. ಮೈಸೂರಿನಲ್ಲಿ ನಡೆದ ನಿರ್ಮಾಪಕ, ಉದ್ಯಮಿ, ರಾಜಕಾರಣಿ ಸಂದೇಶ್ ನಾಗರಾಜ್ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

ಇದೇ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಕೂಡ ಭಾಗಿಯಾಗಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುತ್ತಾ ಕಿಚ್ಚ ʼಬಿಗ್ ಬಾಸ್ʼ ಬಗ್ಗೆ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಕಿಚ್ಚ ಅವರ ಅಪಾರ ಅಭಿಮಾನಿಳು ಸೇರಿದ್ದರು. ಅಭಿಮಾನಿಗಳ ಜೈಕಾರದ ನಡುವೆ ಮಾತು ಆರಂಭಿಸಿದ ಕಿಚ್ಚ, “ ಶೀಘ್ರವೇ ತೆರೆ ಮೇಲೆ ಬರಲಿದ್ದೇನೆ. ಸೆಪ್ಟೆಂಬರ್ 28ರಿಂದ ಕಿರುತೆರೆಗೆ ಬರಲಿದ್ದೇನೆ ಆಶೀರ್ವಾದ ಮಾಡಿ” ಎಂದಿದ್ದಾರೆ. ಈಗಾಗಲೇ ಹಿಂದಿ, ಮಲಯಾಳಂನಲ್ಲಿ ಈಗಾಗಲೇ ಶೋ ಆರಂಭವಾಗಿದೆ. ಇನ್ನು ಕನ್ನಡದಲ್ಲೂ ಬಿಗ್ ಬಾಸ್ ಪ್ರಾರಂಭವಾಗಲಿದೆ. ಈಗಾಗಲೇ ಬಿಗ್ ಬಾಸ್ ಸೀಸನ್ 12 ಲೋಗೋವನ್ನು ರಿವೀಲ್ ಮಾಡಲಾಗಿದೆ.
