ಪೈಚಾರ್: ಸಾಮಾಜಿಕ, ಕ್ರೀಡೆ, ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಳ್ಯ ತಾಲೂಕಿನ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಒಂದಾಗಿರುವ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಇದರ ವತಿಯಿಂದ ಸೋಣಂಗೇರಿ ಅಂಗನವಾಡಿ ಕೇಂದ್ರಕ್ಕೆ, ಮಕ್ಕಳಿಗೆ ಕುಳಿತುಕೊಳ್ಳಲು ಚಯರ್ ಕೊಡುಗೆ ನೀಡಲಾಯಿತು. ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ ಇದ್ದರೂ ಅದಕ್ಕೆ ಅನುಗುಣವಾಗಿ ಕುಳಿತುಕೊಳ್ಳು ಆಸನದ ವ್ಯವಸ್ಥೆ ಕಡಿಮೆ ಇದನ್ನು ಮನಗಂಡ ಅಸ್ತ್ರ ಸ್ಪೋರ್ಟ್ಸ್ ಪೈಚಾರ್ ಸಂಘಟನೆ ಈ ಕೊಡುಗೆ ನೀಡಿದ್ದಾರೆ ಈ ಸಂದರ್ಭದಲ್ಲಿ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಸಂಘಟನೆಯ ಅಧ್ಯಕ್ಷರಾದ ರಿಫಾಯಿ ಎಸ್ ಎ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಕುಸುಮಾವತಿ, ಅಂಗನವಾಡಿ ಶಿಕ್ಷಕಿ ರವಿಕಲ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಾಸಿರ್ ಕೆ.ಪಿ, ಜೊತೆ ಕಾರ್ಯದರ್ಶಿ ಝುಭೈರ್ ಶಾಂತಿನಗರ, ಹಾಗೂ ಸದಸ್ಯ ಅಶ್ರಫ್ ಪೈಚಾರ್ ಮತ್ತು ಶಾಲೆಯ ಸಹ ಶಿಕ್ಷಕರು ಉಪಸ್ಥಿತರಿದ್ದರು.

