ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಮತ್ತು ಸುಳ್ಯ ಪೋಲಿಸ್ ಠಾಣೆ ಜಂಟಿ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ 2025 ನಡೆಯಿತು.ಸುಳ್ಯ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸರಸ್ವತಿ ‘ಪೋಸ್ಕೊ ಕಾಯ್ದೆ’ಯ ಕುರಿತು ಮತ್ತು ಸಬ್ ಇನ್ಸ್ಪೆಕ್ಟರ್ ಸಂತೋಷ ‘ಸೈಬರ್ ಅಪರಾಧಗಳ’, ‘ಮಾದಕ ವಸ್ತುಗಳ ಬಳಕೆಯ ಅಪರಾಧ’ ಮತ್ತು ‘ಟ್ರಾಫಿಕ್ ನಿಯಮಗಳ’ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಸಂಸ್ಥೆಯ ಪ್ರಾಂಶುಪಾಲ ಸುರೇಶ್ ವಾಗ್ಲೆ ಅಧ್ಯಕ್ಷತೆ ವಹಿಸಿದ್ದರು. ಠಾಣೆಯ ಸಿಬ್ಬಂದಿಗಳಾದ ಸಂತೋಷ್, ಪ್ರಕಾಶ್ ಮತ್ತು ರಾಜಶೇಖರ ಉಪಸ್ಥಿತರಿದ್ದರು. ಉಪನ್ಯಾಸಕ ಮೋಹನ್ ಚಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪದ್ಮಕುಮಾರ್ ಸಹಕರಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *