ಸುಳ್ಯ: ಕ್ಯೂ ಕ್ಲಬ್ ಸುಳ್ಯ ಇದರ ವತಿಯಿಂದ ಆಯೋಜಿಸಲಾದ 2026ನೇ ಸಾಲಿನ ಸ್ನೂಕರ್ ಚಾಂಪಿಯನ್‌ಶಿಪ್ ಪಂದ್ಯಾವಳಿಯು ಯಶಸ್ವಿಯಾಗಿ ಸಂಪನ್ನಗೊಂಡಿತು.

ಒಟ್ಟು 24 ಆಟಗಾರರು ಭಾಗವಹಿಸಿದ್ದ ಈ ರೋಚಕ ಪಂದ್ಯಾವಳಿಯಲ್ಲಿ, ಅತ್ಯುತ್ತಮ ಪ್ರದರ್ಶನ ನೀಡಿದ ರಾಝಿಕ್ ಅವರು ವಿಜೇತರಾಗಿ ಹೊರಹೊಮ್ಮಿದರು. ಫೈನಲ್ ಹಣಾಹಣಿಯಲ್ಲಿ ಕಿಶೋರ್ ಶೆಟ್ಟಿ ಅವರು ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡರು.
ಪಂದ್ಯಾವಳಿಯ ಉದ್ಘಾಟನೆಯನ್ನು ಧರ್ಮಪ್ರಸಾದ್ ಕಲ್ಲಗದ್ದೆ ಅವರು ನೆರವೇರಿಸಿದರು.
ನಂತರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅವಿನಾಶ್ ಕುರುಂಜಿ, ಸ್ವಾದ್ ಕ್ಯಾಟರರ್ಸ್‌ನ ಶ್ರವಣ್ ಶೆಟ್ಟಿ ಹಾಗೂ ಮಿಥುನ್ ಅವರು ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಕ್ಯೂ ಕ್ಲಬ್‌ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.




