
ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 17 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಮತ್ತು ಕೃಷಿ ಭೂಮಿಯ ಫಲವತ್ತೆ ಗೆ ಪಯಶ್ವಿನಿ ನದಿಗೆ ಅಡ್ಡಲಾಗಿ ನಾಗಪಟ್ಟಣ ದಲ್ಲಿ ನಿರ್ಮಿಸಿದ ವೆಂಟೆಡ್ ಡ್ಯಾo ಕಾಮಗಾರಿ ಪೂರ್ಣ ಗೊಂಡು 2 ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಲಭಿಸಿಲ್ಲ, ಆದ್ದರಿಂದ ಸಚಿವರಾದ ಭೋಸರಾಜು ರವರು ಸುಳ್ಯಕ್ಕೆ ಆಗಮಿಸಿ ಸದ್ರಿ ವೆಂಟೆಡ್ ಡ್ಯಾo ನ್ನು ಉದ್ಘಾಟಿಸಿ ಸುಳ್ಯಕ್ಕೆ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಇನ್ನಷ್ಟು ಸೌಲಭ್ಯ ಗಳನ್ನು ಕಲ್ಪಿಸಿ ಕೊಡಬೇಕೆಂದು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್, ಸುಳ್ಯ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಸಚಿವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿರುತ್ತಾರೆ
ಮನವಿಗೆ ಸ್ಪಂದಿಸಿದ ಸಚಿವರು ದಿನಾಂಕ ನಿಗದಿ ಪಡಿಸುವಂತೆ ಇಲಾಖೆಗೆ ಸೂಚಿಸಿರುತ್ತಾರೆ.



