ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಮತ್ತು ದೂರುದಾರ ಬಿಗಿ ಪೊಲೀಸ್ ಭದ್ರತೆಯಲ್ಲಿ ಧರ್ಮಸ್ಥಳ ಗ್ರಾಮ ನೇತ್ರಾವತಿ ಸ್ನಾನ ಘಟ್ಟಕ್ಕೆ ಇಂದು ಮಧ್ಯಾಹ್ನ 1 ಗಂಟೆಗೆ ಆಗಮಿಸಿದ್ದು, ದೂರುದಾರನನ್ನು ಕರೆತಂದು ಸ್ಥಳದ ಮಹಜರು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದ್ದು. ಕಂದಾಯ ಇಲಾಖೆ , ಸರ್ವೆ ಇಲಾಖೆ, ಐ.ಎಸ್.ಡಿ(ಅಂತರಿಕ ಭದ್ರತಾ ವಿಭಾಗ) ಎಫ್.ಎಸ್.ಲ್ ವಿಭಾಗದ ಸೋಕೋ ಸಿಬ್ಬಂದಿ ,ಅರಣ್ಯ ಇಲಾಖೆ ತಂಡ ಬೀಡು ಬಿಟ್ಟಿದೆ.

