ಸುಳ್ಯದ ಅಭಿವೃದ್ಧಿಯಲ್ಲಿ ಡೆಲ್ಮಾ ಗ್ರೂಪ್ಸ್ ನ ಕೊಡುಗೆ ಅಪಾರ : ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ


ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ 4 ದಶಕಗಳ ಉದ್ಯಮ ಅನುಭವವನ್ನು ಹೊಂದಿದ ಸುಳ್ಯ ಮೂಲದ ಡೆಲ್ಮಾ ಗ್ರೂಪ್ಸ್ ನ ಓಲ್ ಟೌನ್ ಸೂಪರ್ ಮಾರ್ಕೆಟ್ ನ್ನು ಸುಳ್ಯ ಗಾಂಧಿನಗರ ಯೂನಿಯನ್ ಬ್ಯಾಂಕ್ ಬಳಿಯ ಡೆಲ್ಮಾ ಕಾಂಪ್ಲೆಕ್ಸ್ ನಲ್ಲಿ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ ರಾಮಚಂದ್ರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್’ವರು ಪ್ರಥಮ ಗ್ರಾಹಕ ಕೃಷ್ಣ ಲೈಟಿಂಗ್ಸ್ ಮಾಲಕರಿಗೆ ಉತ್ಪನ್ನಗಳನ್ನು ನೀಡಿ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಪಿ. ಬಿ. ಸುಧಾಕರ್ ರೈ, ಸುಳ್ಯ ಅಲ್ಪ ಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯರುಗಳಾದ ಕೆ. ಎಸ್. ಉಮ್ಮರ್, ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್ಸ್ ಬೂಡು ಭಗವತಿ ಕ್ಷೇತ್ರದ ಸಮಿತಿ ಸದಸ್ಯ ಸುನಿಲ್ ಕೇರ್ಪಳ, ಉದ್ಯಮಿಗಳಾದ ಎಸ್.ಪಿ. ಅಬೂಬಕ್ಕರ್, ಸೀ ಫುಡ್ ಇಬ್ರಾಹಿಂ ಹಾಜಿ, ಹಾಜಿ ಎನ್. ಎಂ. ಅಬ್ದುಲ್ ರೆಹ್ಮಾನ್ ಕಯ್ಯಾರ್ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪಾಲುದಾರರಾದ ಶುಹೈಲ್ ಸ್ವಾಗತಿಸಿ ಇನ್ನೋರ್ವ ಪಾಲುದಾರ ನವಾಝ್ ವಂದಿಸಿದರು. ಪತ್ರಕರ್ತ ಹಸೈನಾರ್ ಜಯನಗರ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ನಿಗಮ ಮಂಡಳಿ ಅಧ್ಯಕ್ಷ ರಾಗಿ ನೇಮಕಗೊಂಡ ಟಿ. ಎಂ ಶಹೀದ್ ರವರನ್ನು ಸನ್ಮಾನಿಸಲಾಯಿತು

Leave a Reply

Your email address will not be published. Required fields are marked *