ಧರ್ಮಸ್ಥಳ: ಬಂಗ್ಲೆಗುಡ್ಡೆ ಕಾಡಿನಲ್ಲಿ ಮುಂದುವರಿದ ಎಸ್ ಐ ಟಿ ಶೋಧ ಕಾರ್ಯಾಚರಣೆಯ ಮಾಧ್ಯಮ ವರದಿಗೆ ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ವಾಗಿ ಧಾರ್ಮಿಕ ಭಾವನೆ ಕೆರಳಿಸುವ ಉದ್ದೇಶದಿಂದ ಕಾಮೆಂಟ್ ಮಾಡಿ ಅಶಾಂತಿ ಸೃಷ್ಟಿಸಿ ಕೋಮು ಗಲಭೆ ಹಬ್ಬುವ ಷಡ್ಯಂತ್ರ ಮಾಡಲು ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ “ಸನಾತನಿ ಸಿಂಹ” ಫೇಸ್‌ಬುಕ್ ಪೇಜ್, ಚೇತನ್ ಹೊದ್ದೆಟ್ಟಿ ಎಂಬಾತನ ವಿರುದ್ಧ ಸುಳ್ಯ ಪೋಲಿಸ್ ಠಾಣೆಯುಲ್ಲಿ ಮುಸ್ಲಿಂ ಯೂತ್ ಫಡೆರೇಶನ್ ಸುಳ್ಯ ತಾಲೂಕು ಸಮಿತಿ ದೂರು ದಾಖಲಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು. ಮಾಧ್ಯಮ ಒಂದರಲ್ಲಿ ಪ್ರಕಟವಾದ ಬಂಗ್ಲೆಗುಡ್ಡೆ ಕಾಡಿನಲ್ಲಿ ಮುಂದುವರಿದ ಎಸ್ ಐ ಟಿ ಶೋಧ ಮತ್ತೆರಡು ತಲೆ ಬುರುಡೆ ಪತ್ತೆ” ಎಂಬ ಟೈಟಲ್ ನೊಂದಿಗೆ ಬಂದ ವರದಿಯ ಫೇಸ್ಬುಕ್ ಕಮೆಂಟ್ ಬಾಕ್ಸ್ ನಲ್ಲಿ “ಸನಾತನಿ ಸಿಂಹ” ಎಂಬ ಖಾತೆಯಿಂದ ಒಂದು ಪೈಗಂಬರದು ಇನ್ನೊಂದು ಆಯೇಷಾ ದು’ ಎಂದು ರಿಪ್ಲಯ್ ಮಾಡಿದ್ದು ಹಾಗೂ ಅದೇ ಕಮೆಂಟ್ ಬಾಕ್ಸ್ ನಲ್ಲಿ Chetan Hoddetty ಎಂಬಾತ ‘ಒಂದು ಪೈಗಂಬರ್ ಇನ್ನೊಂದು ಆಯೇಷಾದು ಇರಬಹುದು’ ಎಂದು ಕಮೆಂಟ್ ಹಾಕಿ ಧಾರ್ಮಿಕ ನಿಂದನೆ, ಅಶಾಂತಿ ಸೃಷ್ಟಿ, ಧಾರ್ಮಿಕ ಭಾವನೆ ಕೆರಳಿಸಿ ಕೋಮು ಗಲಭೆ ಮಾಡುವ ಷಡ್ಯಂತ್ರ ಮತ್ತು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ ಸುಳ್ಯ ಮುಸ್ಲಿಂ ಯೂತ್ ಫೆಡರೇಶನ್ ಇದರ ಅಧ್ಯಕ್ಷರಾದ ಉಮ್ಮರ್ ಕೆ ಎಸ್ ಇವರ ನೇತೃತ್ವದಲ್ಲಿ ಸುಳ್ಯ ಪೊಲೀಸ್ ಠಾಣೆ ಯಲ್ಲಿ ದೂರು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಶರೀಫ್ ಕಂಠಿ, ಸಿದ್ದೀಕ್ ಕ್ಕೂಕ್ಕೊ, ಉನೈಸ್ ಪೆರಾಜೆ, ಇಕ್ಬಾಲ್ ಸುಣ್ಣಮೂಲೆ, ರಶೀದ್ ಜಟ್ಟಿಪಳ್ಳ, ಮುನಾಫರ್, ಉಪಸ್ಥಿತರಿದ್ದರು.