ಕಾಸರಗೋಡು: ಇಲ್ಲಿನ ನೀಲೇಶ್ವರಮ್‌ನಲ್ಲಿ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್’ಶಿಪ್ ನಲ್ಲಿ ಪೈಚಾರ್’ನ ಯುವಕ ಇಬ್ರಾಹಿಂ ಅಫ್ನಾಝ್ ಗೋಲ್ಡನ್ ಬಾಯ್ ಆಗಿ ಹೊರಹೊಮ್ಮಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಕ್ರಮವಾಗಿ ನಡೆದ 100ಮೀ, 200ಮೀ, 400ಮೀ ಓಟದಲ್ಲಿ, ಮೂರರಲ್ಲೂ ಚಿನ್ನ ಪದಕ ಗೆದ್ದುಕೊಂಡು ವೈಯಕ್ತಿಕ ಚಾಂಪಿಯನ್ ಪಟ್ಟ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಪೈಚಾರ್ ಬೆಟ್ಟಂಪಾಡಿ ನಿವಾಸಿ ರಹೀಮ್ ಹಾಗೂ ಝೌರಾ ದಂಪತಿಗಳ ಪುತ್ರ.
