ದುಬೈ: (ಐಎಫ್’ಬಿಬಿ) ಇಂಟರ್ನ್ಯಾಷನಲ್ ಫಿಟ್ನೆಸ್ & ಬಾಡಿ ಬಿಲ್ಡಿಂಗ್ ಫೆಡರೇಶನ್ ನಡೆಸಿದ ಅಂತರಾಷ್ಟ್ರೀಯ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಸುಳ್ಯದ ಯುವಕನಿಗೆ ಪ್ರಶಸ್ತಿ ಒಲಿದಿದೆ. ಯುಎಇ ಇಲ್ಲಿನ ಫುಜೈರಾದಲ್ಲಿ ದಿನಾಂಕ ಸೆ.6 ರಂದು ನಡೆದ 179 ಸೆ.ಮಿ ವಿಭಾಗದಲ್ಲಿ ಸುಳ್ಯದ ಅಬ್ದುಲ್ ರವೂಫ್ ಬಿ.ಎ ಎಂಬುವವರು ಒಂಬತ್ತನೇ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಒಟ್ಟು ಇಪ್ಪತ್ತೈದು ಅಂತರರಾಷ್ಟ್ರೀಯ ದೇಹದಾರ್ಡ್ಯ ಸ್ಪರ್ಧಾಳುಗಳು ಆಗಮಿಸಿದ್ದು, ಇದರಲ್ಲಿ ಭಾರತ ಮೂಲದವನಾಗಿ ಸುಳ್ಯ ಜಟ್ಟಿಪಳ್ಳದ ಅಬ್ದುಲ್ ರವೂಫ್ ಬಿ.ಎ ಒಬ್ಬನೇ ಸ್ಪರ್ಧಿಸಿದ್ದ, ಇವರ ಪ್ರಥಮ ಅಂತರರಾಷ್ಟ್ರೀಯ ಸ್ಪರ್ಧೆ ಇದಾಗಿದ್ದು, ಪಪ್ರಥಮ ಹಂತದಲ್ಲೇ ಟಾಪ್ 9 ಪ್ರಶಸ್ತಿ ಸಿಕ್ಕಿದ್ದು ತುಂಬಾ ಸಂತಸ ತಂದಿದೆ ಎಂದಿದ್ದಾರೆ.