ದುಗಲಡ್ಕ: ಇಲ್ಲಿನ ಮಸೀದಿಯಲ್ಲಿ ಈದ್ ಹಬ್ಬವನ್ನು ಅತ್ಯಂತ ಭಕ್ತಿ ಹಾಗೂ ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.

​ಈ ಪವಿತ್ರ ಸಂದರ್ಭದಲ್ಲಿ ಸೈಯದ್ ಪಝಲ್ ತಂಙಲ್ ರವರು ಜುಮಾ ಖುತುಬಾವನ್ನು ನಿರ್ವಹಿಸಿದರು. ಬಳಿಕ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಸೈಯದ್ ಝೈನುಲ್ ಆಬಿದೀನ್ ತಂಙಲ್ ರವರು, ಸರ್ವರಿಗೂ ಅರ್ಥಪೂರ್ಣವಾದ ಈದ್ ಸಂದೇಶವನ್ನು ನೀಡಿದರು.

​ವಿಶೇಷ ನಮಾಝ್ ಮತ್ತು ಪ್ರಾರ್ಥನೆಯ ನಂತರ ಮಸೀದಿಯ ಜಮಾಅತರು ಪರಸ್ಪರ ಆಲಿಂಗನ ಮಾಡಿಕೊಂಡು, ಪ್ರೀತಿಯಿಂದ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಬ್ಬದ ಪ್ರಯುಕ್ತ ಮಸೀದಿ ಆವರಣದಲ್ಲಿ ಸಂಭ್ರಮದ ಹಾಗೂ ಸಹೋದರತೆಯ ವಾತಾವರಣ ಮನೆಮಾಡಿತ್ತು.

Leave a Reply

Your email address will not be published. Required fields are marked *