ಸುಳ್ಯ: ಪವಿತ್ರ ರಂಜಾನ್ ಮಾಸದ ಉಪವಾಸ ವ್ರತದ ಅಂತ್ಯದ ಸಂಕೇತವಾದ ಈದ್-ಉಲ್-ಫಿತರ್ ಹಬ್ಬವನ್ನು ಸುಳ್ಯದ ಮಸ್ಜಿದ್ ಹಾಜಿರ ಹಸನ್‌ನಲ್ಲಿ ಅತ್ಯಂತ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಮಸೀದಿಯಲ್ಲಿ ಜರುಗಿದ ಹಬ್ಬದ ವಿಶೇಷ ಪ್ರಾರ್ಥನೆ ಮತ್ತು ಕಾರ್ಯಕ್ರಮಗಳಲ್ಲಿ ಜನಾಬ್ ಶಾನವಾಝ್ ಕೊಡುವಳ್ಳಿ ಅವರು ಭಾಗವಹಿಸಿ, ಮಾರ್ಗದರ್ಶನ ನೀಡಿದರು. ಮುಂಜಾನೆಯಿಂದಲೇ ಆಗಮಿಸಿದ ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ, ಮಸೀದಿಯಲ್ಲಿ ಜಮಾಯಿಸಿ ಈದ್ ನಮಾಝ್ ನಿರ್ವಹಿಸಿದರು. ನಮಾಝ್ ಬಳಿಕ ಪ್ರವಚನ ನೀಡಿದ ಜನಾಬ್ ಶಾನವಾಝ್ ಕೊಡುವಳ್ಳಿ ಅವರು ಈದ್ ಹಬ್ಬದ ಸಂದೇಶವನ್ನು ವಿವರಿಸಿದರು.

​ಪ್ರಾರ್ಥನೆಯ ಬಳಿಕ ನೆರೆದಿದ್ದವರು ಪರಸ್ಪರ ಆಲಿಂಗನ ಮಾಡುವ ಮೂಲಕ ‘ಈದ್ ಮುಬಾರಕ್’ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಬ್ಬದ ಪ್ರಯುಕ್ತ ಮಸೀದಿಯ ಆವರಣದಲ್ಲಿ ಹಬ್ಬದ ಕಳೆ ಕಳೆಗಟ್ಟಿತ್ತು ಹಾಗೂ ಎಲ್ಲೆಡೆ ಶಾಂತಿ, ಸೌಹಾರ್ದತೆ ಮತ್ತು ಸಹೋದರತೆಯ ಸಂದೇಶವನ್ನು ಸಾರಲಾಯಿತು.

Leave a Reply

Your email address will not be published. Required fields are marked *