ದಿನಾಂಕ 05/06/2025 ರಂದು ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಗೂನಡ್ಕ ಇಲ್ಲಿ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿವಿಧ ಗಿಡಗಳನ್ನು ನೆಡುವ ಮೂಲಕ ಪರಿಸರಸ್ನೇಹಿ ಚಟುವಟಿಕೆಗಳಲ್ಲಿ ಭಾಗಿಯಾದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸಂಪತ್ ಜೆ ಡಿ ದಿನದ ಮಹತ್ವದ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರಾದ ಸಾಧಿಕ ಎ ಕೆ, ಕೈರುನ್ನೀಸ, ಸೋನಿಯಾ, ಸೈನಾಜ್, ಆಯಿಷತ್ ನೌಫಿಯಾ,ಆಯಿಷತ್ ಸುನೈನಾ, ಅರ್ಫಾನ, ಆಯಿಷತ್ ನುಸೈಭಾ, ಮುನೀಷಾ, ಆಯಿಷತ್ ಸಬೀರಾ ಮತ್ತು ಮಹಮ್ಮದ್ ವಾರೀಸ್ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಪರಿಸರ ದಿನ’ವನ್ನು ಸಂಭ್ರಮದಿಂದ ಆಚರಿಸಲಾಯಿತು.

