ದುಬೈ: ಇರಾನ್ ಹಾಗೂ ಅಮೆರಿಕ-ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ, ದುಬೈ ನಗರದ ಅಲ್ ಬರ್ಷಾ (Al Barsha) ಪ್ರದೇಶದಲ್ಲಿ ವೈಮಾನಿಕ ದಾಳಿಯನ್ನು ತಡೆಗಟ್ಟಿದಾಗ ಉದುರಿದ ಅವಶೇಷಗಳು (Shrapnel) ವಾಹನದ ಮೇಲೆ ಬಿದ್ದ ಪರಿಣಾಮ, ಪಾಕಿಸ್ತಾನ ಮೂಲದ ಚಾಲಕನೊಬ್ಬ ಮೃತಪಟ್ಟಿದ್ದಾನೆ.

​ಯುಎಇ (UAE) ಕಡೆಗೆ ಬಂದ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ವಾಯು ರಕ್ಷಣಾ ವ್ಯವಸ್ಥೆಯು (Air Defence System) ಗಾಳಿಯಲ್ಲೇ ಯಶಸ್ವಿಯಾಗಿ ಹೊಡೆದುರುಳಿಸಿದೆ. ಈ ಕಾರ್ಯಾಚರಣೆಯ ವೇಳೆ ಛಿದ್ರಗೊಂಡ ಲೋಹದ ಅವಶೇಷಗಳು ಕೆಳಗೆ ವಾಹನದ ಮೇಲೆ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ‘ದುಬೈ ಮೀಡಿಯಾ ಆಫೀಸ್’ ಸ್ಪಷ್ಟಪಡಿಸಿದೆ. ಇದೇ ವೇಳೆ, ದುಬೈ ಮರೀನಾ ಪ್ರದೇಶದ ಕಟ್ಟಡವೊಂದಕ್ಕೂ ಕೆಲವು ಅವಶೇಷಗಳು ಬಿದ್ದಿದ್ದು ಸಣ್ಣಪುಟ್ಟ ಹಾನಿಯಾಗಿದೆ, ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದುಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿತ್ತು.

Leave a Reply

Your email address will not be published. Required fields are marked *