ಸಾವಿರಾರು ಭಕ್ತಾದಿಗಳ ಆಶಾ ಕೇಂದ್ರ ದುಗುಲಡ್ಕ ದರ್ಗಾ ಶರೀಫ್: ಝೃನುಲ್ ಆಬಿಧೀನ್ ತಂಙಳ್

ಸುಳ್ಯ : ದುಗ್ಗಲಡ್ಕ ಸಯ್ಯದ್ ಫಖ್ರುದ್ದೀನ್ ತಂಙಳ್ (ನ.ಮ) 22 ನೇ ಆಂಡ್ ನೇರ್ಚ ಹಾಗೂ ಜಂಇಯ್ಯತ್ತು ತರ್ಬಿಯ್ಯತ್ತಿಲ್ ಬುಖಾರಿಯ್ಯದ 32 ನೇ ವಾರ್ಷಿಕ ಖುತುಬಿಯ್ಯತ್ ಕಾರ್ಯಕ್ರಮ ಡಿ. 25,26 27,28,29 ಈ 5 ದಿನಗಳಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಸಯ್ಯದ್ ಝೃನುಲ್ ಆಬಿದೀನ್ ತಂಙಳ್ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು ಕರ್ನಾಟಕ ಕೇರಳ ಅಲ್ಲದೆ ಬೇರೆ ಬೇರೆ ರಾಜ್ಯಗಳ ಸಾವಿರಾರು ಭಕ್ತಾದಿಗಳ ಆಶಾ ಕೇಂದ್ರವಾಗಿ ದುಗಲಡ್ಕ ದರ್ಗಾ ಶರೀಫ್ ಬೆಳೆದು ಬಂದಿದ್ದು ಜಾತಿ ಮತ ಭೇದ ಭಾವವಿಲ್ಲದೆ ಜನರು ಇಲ್ಲಿ ಬಂದು ಸೇರುತ್ತಾರೆ. ತಮ್ಮ ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಂಡು ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಇವೆಲ್ಲವೂ ನಮ್ಮ ತಂದೆಯವರಾದ ಫಖ್ರುದ್ದೀನ್ ತಂಙಳ್ ರವರಿಗೆ ಅಲ್ಲಾಹನು ನೀಡಿದ ಅನುಗ್ರಹವಾಗಿದೆ.

ಈ ಬಾರಿಯ ಕಾರ್ಯಕ್ರಮದಲ್ಲಿ ಡಿ.25 ಗುರುವಾರ ಸಂಜೆ 4 ಗಂಟೆಗೆ ಧ್ವಜಾರೋಹಣೆ
ಸಯ್ಯದ್ ಹಾಮಿದ್ ಕೋಯಮ್ಮ ತಂಙಳ್ ನಡುವನ್ನೂರ್ ಇವರ ನೇತೃತ್ವದಲ್ಲಿ ನಡೆಯಲಿದ್ದು
ಸಂಜೆ 5 ಗಂಟೆಗೆ ಉದ್ಘಾಟನಾ ಸಮ್ಮೇಳನ ನಡೆಯಲಿದೆ.

ಸಂಸ್ಥೆಯ ಅಧ್ಯಕ್ಷರಾದ ನಾನು ಸಯ್ಯದ್ ಝೖನುಲ್ ಆಬಿದೀನ್ ತಂಙಳ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದೇನೆ.
ಸಭಾ ಉದ್ಘಾಟನೆಯನ್ನು ಮಂಗಳೂರು ಸಂಯುಕ್ತ ಖಾಝಿ ಹಾಗೂ ಹಿರಿಯ ವಿದ್ವಾಂಸ ತ್ವಾಖಾ ಅಹ್ಮದ ಮೌಲವಿ ರವರು ಮಾಡಲಿದ್ದು ಅನುಗ್ರಹ ಪ್ರಭಾಷಣವನ್ನು ಖ್ಯಾತ ವಾಗ್ಮಿ ಅಬ್ದುಲ್ಲಾ ಫೈಝಿ ಚೆಂಗಳ ಇವರು ಮಾಡಲಿದ್ದಾರೆ.ಪ್ರಭಾಷಣಕಾರರಾಗಿ ಖ್ಯಾತ ಪ್ರಭಾಷಣಕಾರಾದ ಅಬ್ದುಲ್ ಕರೀಂ ಫೈಝಿ ಮುಕೂಡ್
ಹಾಗೂ ಅಡ್ವೋಕೇಟ್ ಹನೀಫ್ ಹುದವಿ ದೇಲಂಪಾಡಿ ರವರು ಭಾಗವಹಿಸಲಿದ್ದಾರೆ.

ಮುಖ್ಯಪ್ರಭಾಷಣವನ್ನು ಪ್ರಭಾಷಣ ವೇದಿಕೆಯಲ್ಲಿ ತನ್ನದೇ ಚಾಪನ್ನು ಮೂಡಿಸಿರುವ ಮುಹಮ್ಮದ್ ಹನೀಫ್ ನಿಝಾಮಿ ರವರು ತಮ್ಮ ಆಕರ್ಷಕ ಶೈಲಿಯಲ್ಲಿ ಮಾತನಾಡಲಿದ್ದಾರೆ.
ಕಾರ್ಯಕ್ರಮದ 2 ನೇಯ ದಿನವಾದ ಡಿ 26 ರಂದು ಸಂಜೆ 6.30 ಕ್ಕೆ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮಕ್ಕೆ ಖ್ಯಾತ ಪ್ರಭಾಷಣಕಾರರಾದ ಖಲೀಲ್ ಹುದವಿ ಕಾಸರಗೋಡು ಹಾಗೂ ಸಿಂಸಾರುಲ್ ಹಖ್ ಹುದವಿ ಇವರು ಭಾಗವಹಿಸಲಿದ್ದಾರೆ.

ಡಿ. 28 ರಂದು ಬೆಳಗ್ಗೆ 11 ಗಂಟೆಗೆ ಜಾಮಿಅ ಬುಖಾರಿಯ್ಯಾ ಅರಬಿಕ್ ಕಾಲೇಜು ವಿದ್ಯಾರ್ಥಿಗಳ ಫೆಸ್ಟ್ ಕಾರ್ಯಕ್ರಮ ನಡೆಯಲಿದ್ದು
ಸಮರೋಪ ಸಮಾರಂಭ ದಿನವಾದ ಡಿ.29 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಕುಟುಂಬ ಸಂಗಮ 11 ಗಂಟೆಗೆ ದಾನಿಗಳ ಸಹಕಾರದಿಂದ ನಿರ್ಮಿಸಿರುವ ಹಾಸ್ಟೆಲ್ ಕಟ್ಟಡ ಉದ್ಘಾಟನಾ ಸಯ್ಯದ್ ಮುನವ್ವರಲಿ ಶಿಯಾಬ್ ತಂಙಳ್ ರವರ ದಿವ್ಯ ಹಸ್ತದ ಮೂಲಕ ನಡೆಯಲಿದೆ.
ಸಂಜೆ 6.30ಕ್ಕೆ ನಡೆಯುವ ಪ್ರಭಾಷಣ ಕಾರ್ಯಕ್ರಮದ ವೇದಿಕೆಯಲ್ಲಿ ಮೌಲಾನಾ ಎ ನಜೀಬ್ ಮೌಲವಿ ಹಾಗೂ ಖ್ಯಾತ ವಾಗ್ಮಿಗಳಾದ ಬಶೀರ್ ಫೈಝಿ ಚೆರುಕುನ್ನು ಇವರು ಭಾಗವಹಿಸಲಿದ್ದು ರಾತ್ರಿ 11 ಗಂಟೆಗೆ ಖತಮುಲ್ ಖುರ್ ಹಾನ್ ಮತ್ತು ಖುತುಬಿಯ್ಯತ್ ನಡೆಯಲಿದೆ.

ಬಳಿಕ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆದು ಸಮಾರೋಪ ಸಮಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಆಫಿಲ್ ಸಿಹಾಬ್ ದಾರಿಲಿ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಅಬ್ದುಲ್ ರಹಮಾನ್ ಹಾಜಿ, ಬಹರಿಯ ಕಮಿಟಿ ಸದಸ್ಯರಾದ ಕೆ ಮಹಮ್ಮದ್, ಮಾಜಿ ಅಧ್ಯಕ್ಷರಾದ ಕೆಎಂ ಹಸೈನಾರ್ ಕಳಂಜಿ ಕೋಡಿ, ಜಮಾಅತ್ ಕಾರ್ಯದರ್ಶಿ ಹಂಝ ದೊಡ್ಡತೋಟ (ಅಜ್ಮೀರ್), ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷರಾದ ಹುಸೈನ್, ಕಾರ್ಯದರ್ಶಿ ಆರಿಫ್ ದುಗಲಡ್ಕ, ಹಾಗೂ ಷರೀಫ್ ದೊಡ್ಡತೋಟ, ಮಹಮ್ಮದ್ ಬಾದಷಾ,ವಿದ್ಯಾರ್ಥಿಗಳಾದ ಎನ್ ಪಿ ಎಂ ಸಯ್ಯದ್ ರಾಝೀ ತಂಙಳ್, ಶಾಹುಲ್ ಹಮೀದ್, ಆದಿಲ್, ನಬ್ಹಾನ್, ಖರ್ರಾರ್ ಇವರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *